ಸಂಕ್ರಾಂತಿ ಹಬ್ಬ ಹಾಗೂ ಹೊಸ ಅಳಿಯಂದಿರ ನಡುವೆ ಅವಿನಾಭಾವ ಸಂಬಂಧವಿದೆ. ವಿಶೇಷವಾಗಿ ಹಲವು ಜಿಲ್ಲೆಗಳಲ್ಲಿ, ಅಳಿಯನನ್ನು ಲಕ್ಷ್ಮಿ ಮತ್ತು ನಾರಾಯಣರ ನಿಜವಾದ ಸಾಕಾರವೆಂದು ಪರಿಗಣಿಸಿ ಅತ್ತೆ-ಮಾವಂದಿರುವ ನೀಡುವ ಆತಿಥ್ಯವು ಶತಮಾನಗಳಷ್ಟು ಹಳೆಯ ಸಂಪ್ರದಾಯವಾಗಿದೆ. ಪ್ರೀತಿ ಮತ್ತು ಗೌರವದ ಮಿಶ್ರಣವಾಗಿರುವ ಈ ಸಂಪ್ರದಾಯವನ್ನು ಎಲ್ಲಾ ಕಡೆ ಆಚರಿಸಲಾಗುತ್ತದೆ.
ಅಳಿಯನಿಗೆ ಅದ್ಧೂರಿ ಸ್ವಾಗತ
ಆಂಧ್ರ ಪ್ರದೇಶ ಗುಂಟೂರು ಜಿಲ್ಲೆಯ ತೆನಾಲಿಯ ವಂದನಾಪು ಮುರಳೀಕೃಷ್ಣ-ಲಕ್ಷ್ಮಿ ದಂಪತಿಗಳು ಕಳೆದ ವರ್ಷ ತಮ್ಮ ಮಗಳು ಮೌನಿಕಾಳನ್ನು ರಾಜಮಂಡ್ರಿಯ ಶ್ರೀದತ್ತ ಎಂಬುವವರಿಗೆ ಮದುವೆ ಮಾಡಿಕೊಟ್ಟರು. ಮದುವೆಯ ನಂತರ, ಅಳಿಯ ಶ್ರೀದತ್ತ ತಮ್ಮ ಮನೆಗೆ ಭೇಟಿ ನೀಡಿದ ಮೊದಲ ಸಂಕ್ರಾಂತಿಯನ್ನು ಸ್ಮರಣೀಯವಾಗಿಸಲು ಅತ್ತೆ-ಮಾವಂದಿರು ನಿರ್ಧರಿಸಿದರು. ಅಳಿಯನಿಗೆ ಅತ್ತೆ ಬರೋಬ್ಬರಿ 158 ಬಗೆಯ ಅಡುಗೆ ಮಾಡಿ ಬಡಿಸಿದ್ದಾರೆ.
ಔತಣಕೂಟದಲ್ಲಿ ತಮ್ಮ ಅಳಿಯನಿಗೆ 158 ಬಗೆಯ ಖಾದ್ಯಗಳನ್ನು ಬಡಿಸಿದರು. , ಹಲವು ಬಗೆಯ ಸಿಹಿತಿಂಡಿಗಳು, ಮಸಾಲೆಗಳು, ಉಪ್ಪಿನಕಾಯಿ ಮತ್ತು ವಿವಿಧ ರೀತಿಯ ಆಹಾರ ಪದಾರ್ಥಗಳು ಇದ್ದವು. ಊಟದ ಟೇಬಲ್ ನಲ್ಲಿ ಈ ಖಾದ್ಯಗಳನ್ನು ನೋಡಿ, ಹೊಸ ಅಳಿಯ ಮಾತ್ರವಲ್ಲದೆ ಸ್ಥಳೀಯರು ಸಹ ಅಚ್ಚರಿ ವ್ಯಕ್ತಪಡಿಸಿದರು.
ಇದನ್ನು ನೋಡಿದ ಅಳಿಯ, ತನ್ನ ಅತ್ತೆ-ಮಾವ ತೋರಿಸಿದ ಅಸಾಧಾರಣ ಪ್ರೀತಿ ಮತ್ತು ವಾತ್ಸಲ್ಯವನ್ನು ನೋಡಿ ಸಂತೋಷ ವ್ಯಕ್ತಪಡಿಸಿದರು. ತನ್ನ ಜೀವನದುದ್ದಕ್ಕೂ ನೆನಪಿನಲ್ಲಿ ಉಳಿಯುವಂತಹ ಗೌರವವನ್ನು ನೀಡಿದ್ದಕ್ಕಾಗಿ ಅವರು ತಮ್ಮ ಅತ್ತೆ-ಮಾವಂದಿರಿಗೆ ಧನ್ಯವಾದ ಅರ್ಪಿಸಿದರು. ‘ಅತಿಥಿ ದೇವೋಭವ’ ಎಂಬ ಪರಿಕಲ್ಪನೆಯು ಇಂದಿನ ಆಧುನಿಕ ಕಾಲದಲ್ಲಿಯೂ ಜೀವಂತವಾಗಿರುವುದು ದೊಡ್ಡ ವಿಷಯ ಎಂದು ಕುಟುಂಬ ಸದಸ್ಯರು ಸಂತೋಷದಿಂದ ಹೇಳಿದರು.




