ಮನುಷ್ಯನಿಗೂ ನಿದ್ದೆ ಅನ್ನೋದು ಬಹಳ ಮುಖ್ಯವಾಗುತ್ತದೆ.. ಆದರೆ ಇತ್ತೀಚೆಗೆ ಕೆಲಸ ಒತ್ತಡ, ಬದಲಾದ ಜೀವನ ಶೈಲಿಯಿಂದ ನಿದ್ರಾಹೀನತೆಗೆ ಒಳಗಾಗುತ್ತಾರೆ.
ಆದ್ರೆ ಇಲ್ಲೊಬ್ಬ ಮಧ್ಯಪ್ರದೇಶದ ವ್ಯಕ್ತಿಯೊಬ್ಬರು ಕಳೆದ 50 ವರ್ಷಗಳಲ್ಲಿ ಒಂದೇ ಒಂದು ಕ್ಷಣವೂ ನಿದ್ದೆ ಮಾಡಿಲ್ಲ, ಆದರೆ ಸಾಮಾನ್ಯ ಆರೋಗ್ಯಕರ ಜೀವನವನ್ನು ನಡೆಸುತ್ತಿದ್ದೇನೆ ಎಂದು ಹೇಳಿಕೊಳ್ಳುವ ಮೂಲಕ ವೈದ್ಯಲೋಕಕ್ಕೆ ಸವಾಲು ಹಾಕಿದ್ದಾರೆ.ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮಧ್ಯಪ್ರದೇಶದ ರೇವಾ ಜಿಲ್ಲೆಯ ಚಾಣಕ್ಯಪುರಿ ಕಾಲೋನಿಯ ನಿವಾಸಿ ಮೋಹನ್ ಲಾಲ್ ದ್ವಿವೇದಿ ಅವರು ಈ ವಿಚಾರವನ್ನು ಹೇಳಿಕೊಂಡಿದ್ದು 1973ರಿಂದ ಇಂದಿನವರೆಗೆ ತಾನು ನಿದ್ದೆಯೇ ಮಾಡಿಲ್ಲ ಅಂದಿದ್ದಾರೆ. ಮೋಹನ್ಲಾಲ್ ದ್ವಿವೇದಿ ಅವರಿಗೆ 75 ವರ್ಷ ವಯಸ್ಸು ಆಗಿದ್ದು ಆರಾಮವಾಗಿ ಕಾಲ ಕಳೆಯುತ್ತಿದ್ದಾರೆ.
ಸಾಮಾನ್ಯವಾಗಿ ನಿದ್ದೆ ಇಲ್ಲ ಸಂದಾಗತ ಕಣ್ಣು ಕೆಂಪಾಗುವುದು, ತಲೆ ನೋವಿನಂತ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆದರೆ ದ್ವಿವೇದಿ ಅವರಿಗೆ ಇಂತಹ ಯಾವುದೇ ಲಕ್ಷಣಗಳಿಲ್ಲ. ಅವರು ದಿನದ 24 ಗಂಟೆಯೂ ಆಯಕ್ಟಿವ್ ಆಗಿ ಇದ್ದಾರೆ.
ದ್ವಿವೇದಿ ಅವರ ವೃತ್ತಿಪರ ಜೀವನದಲ್ಲಿ ಕೂಡ ಯಾವುದೇ ಅಡಚಣೆಗಳಿಲ್ಲ. ಅವರು 1973 ರಲ್ಲಿ ಉಪನ್ಯಾಸಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು, 1974 ರಲ್ಲಿ ಮಧ್ಯಪ್ರದೇಶ ಸಾರ್ವ ಜನಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಉಪ ತಹಶೀಲ್ದಾರ್ ಆದರು ಮತ್ತು ಅಂತಿಮವಾಗಿ 2001 ರಲ್ಲಿ ಜಂಟಿ ಕಲೆಕ್ಟರ್ ಆಗಿ ನಿವೃತ್ತರಾದರು.
ಎಲ್ಲರೂ ನಿದ್ದೆ ಮಾಡುವಾಗ ಇವರು ಪುಸ್ತಕ ಓದುವುದು ಅಥವಾ ಮನೆಯ ತಾರಸಿಯಲ್ಲಿ ಸಮಯ ಕಳೆಯುತ್ತಾರೆ. ವಿಶೇಷ ವೆಂದರೆ ಇವರ ಪತ್ನಿ ಕೂಡ ದಿನಕ್ಕೆ ಕೇವಲ 3-4 ಗಂಟೆ ಮಾತ್ರ ನಿದ್ದೆ ಮಾಡುತ್ತಾರಂತೆ.
ರೇವ ಜಿಲ್ಲೆಯ ಸಂಜಯ್ ಗಾಂಧಿ ಆಸ್ಪತ್ರೆಯ ವೈದ್ಯರು ಈ ಪ್ರಕರಣವನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ದ್ವಿವೇದಿ ಅವರು ಮತ್ತೊಮ್ಮೆ ಮನೋವಿಜ್ಞಾನ ವಿಭಾಗದ ತಜ್ಞರನ್ನು ಸಂಪರ್ಕಿಸುವಂತೆ ಅವರು ಸಲಹೆ ನೀಡಿದ್ದಾರೆ.
ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು ನಿದ್ದೆ ಪ್ರತಿಯೊಬ್ಬನಿಗೂ ಅಗತ್ಯವಾಗಿದೆ..ಇಲ್ಲಿ ಏನೋ ಸಮಸ್ಯೆ ಇರಬೇಕು, ನಿದ್ದೆ ಇಲ್ಲದೆ ಬದುಕು ಅಸಾಧ್ಯ ಎಂದು ಬರೆದುಕೊಂಡಿದ್ದಾರೆ..




