ಬುಲಾವಾಯೋ ( ಜಿಂಬಾಬ್ವೆ): ಭಾರತದ ಕಿರಿಯರ ಕ್ರಿಕೆಟ್ ತಂಡವು ಇಲ್ಲಿ ನಡೆದಿರುವ (೧೯ ರ್ಷದೊಳಗಿನವರ) ವಿಶ್ವಕಪ್ ಕ್ರಿಕೆಟ್ ಪಂದ್ಯಾವಳೀಯಲ್ಲಿ ಯುನೈಟೆಡ್ ಸ್ಟೇಟ್ಸ್ ಅಮೇರಿಕ ತಂಡವನ್ನು ಸೋಲಿಸುವ ಮೂಳಕ ಪಂದ್ಯಾವಳಿಯಲ್ಲಿ ಶುಭಾರಂಭ ಮಾಡಿದೆ.
ಮೊದಲು ಬ್ಯಾಟ್ ಮಾಡಿದ ಯುನೈಟೆಡ್ ಸ್ಟೇಟ್ಸ್ ಅಮೇರಿಕ ತಂಡವು ೧೦೭ ರನ್ ಗಳಿಗೆ ಆಲೌಟಾಯಿತು. ನಂತರ ಮಳೆಯ ಕಾರಣ ಭಾರತಕ್ಕೆ ೩೭ ಓವರುಗಳಲ್ಲಿ ಗೆಲುವಿಗೆ ೯೭ ರನ್ ಗಳ ಗೆಲುವಿನ ಗುರಿ ನೀಡಲಾಯಿತು. ಭಾರತ ಕಿರಿಯರ ತಂಡವು ಈ ಗುರಿಯನ್ನು ೧೭.೨ ಓವರುಗಳಲ್ಲಿ ೪ ವಿಕೆಟ್ಗಳಿಗೆ ೯೯ ರನ್ ಗಳಿಸುವ ಮೂಲಕ ಗೆಲುವಿನ ಗುರಿ ತಲುಪಿತು.
ಕಿರಿಯರ ವಿಶ್ವಕಪ್ ಕ್ರಿಕೆಟ್: ಭಾರತದ ಶುಭಾರಂಭ




