Ad imageAd image

ಹುಬ್ಬಳ್ಳಿಯಲ್ಲಿ ಚೈನೀಸ್ ವೋಕ್ ಆರಂಭ

Bharath Vaibhav
ಹುಬ್ಬಳ್ಳಿಯಲ್ಲಿ ಚೈನೀಸ್ ವೋಕ್ ಆರಂಭ
WhatsApp Group Join Now
Telegram Group Join Now

ಹುಬ್ಬಳ್ಳಿ : ಲೆನೆಕ್ಸಿಸ್ ಫುಡ್‌ವರ್ಕ್ಸ್‌ನ ಭಾರತದ ಪ್ರಮುಖ ದೇಸಿ ಚೈನೀಸ್ ತ್ವರಿತ ಸೇವೆಗಳ ರೆಸ್ಟೊರೆಂಟ್‌ (ಕ್ಯುಎಸ್‌ಆರ್‌) ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ಚೈನೀಸ್ ವೋಕ್, ಹುಬ್ಬಳ್ಳಿಯ ಇನಾರ್ಬಿಟ್ ಮಾಲ್‌ನಲ್ಲಿ ತನ್ನ ಮೊದಲ ಮಳಿಗೆ ಆರಂಭಿಸುವುದಾಗಿ ಪ್ರಕಟಿಸಿದೆ.
ಹುಬ್ಬಳ್ಳಿಯಲ್ಲಿನ ಈ ಹೊಸ ಮಳಿಗೆಯ ಆರಂಭವು, ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ಮತ್ತು ಶಿಕ್ಷಣ ಕೇಂದ್ರಗಳಲ್ಲಿ ಒಂದಾಗಿರುವ ನಗರದಲ್ಲಿ ಬ್ರ್ಯಾಂಡ್‌ನ ವಹಿವಾಟು ವಿಸ್ತರಣೆಗೆ ನಿದರ್ಶನವಾಗಿದೆ. ಹೆಚ್ಚುತ್ತಿರುವ ಯುವ ಜನಸಂಖ್ಯೆ, ಜನಪ್ರಿಯವಾಗುತ್ತಿರುವ ಮಾಲ್ ಸಂಸ್ಕೃತಿ ಮತ್ತು ಸಂಘಟಿತ ಊಟದ ಸ್ವರೂಪಗಳಿಗೆ ಹೆಚ್ಚುತ್ತಿರುವ ಆದ್ಯತೆಗೆ ಹುಬ್ಬಳ್ಳಿಯು ಹೆಸರುವಾಸಿಯಾಗಿದೆ. ಚೈನಿಸ್‌ ವೋಕ್‌ ಮಳಿಗೆಯ ಆರಂಭವು ಇದಕ್ಕೆ ಪೂರಕವಾಗಿದೆ.

ಈ ಹೊಸ ಮಳಿಗೆಯೊಂದಿಗೆ, ಚೈನೀಸ್ ವೋಕ್ ಈಗ ರಾಜ್ಯದಾದ್ಯಂತ 36 ಮಳಿಗೆಗಳನ್ನು ನಿರ್ವಹಿಸುತ್ತಿದೆ. ಇದರಲ್ಲಿ ಬೆಂಗಳೂರಿನಲ್ಲಿ 31 ಮಳಿಗೆಗಳು ಸೇರಿವೆ. ದಕ್ಷಿಣ ಭಾರತದಲ್ಲಿ ಒಟ್ಟು 87 ಮಳಿಗೆಗಳಿವೆ. ಹುಬ್ಬಳ್ಳಿಯಂತಹ ಗಮನಾರ್ಹವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಗ್ರಾಹಕರಿಗೆ ತನ್ನ ಜನಪ್ರಿಯ ದೇಸಿ ಚೈನೀಸ್ ಪಾಕಪದ್ಧತಿಯನ್ನು ಹೆಚ್ಚಿನ ಗ್ರಾಹಕರಿಗೆ ಪರಿಚಯಿಸುವ ಗುರಿಯನ್ನು ಬ್ರ್ಯಾಂಡ್ ಹೊಂದಿದೆ.
ದಕ್ಷಿಣ ಭಾರತವು ಬ್ರ್ಯಾಂಡ್‌ ಪಾಲಿಗೆ ವಹಿವಾಟು ಬೆಳವಣಿಗೆಯ ಪ್ರಮುಖ ತಾಣವಾಗಿದೆ. ಸಂಘಟಿತ ಸ್ವರೂಪದ ಆಹಾರವನ್ನು ತ್ವರಿತವಾಗಿ ಪೂರೈಸುವುದಕ್ಕೆ ಹೆಚ್ಚುತ್ತಿರುವ ಸ್ವೀಕಾರ, ಬಿಸಿ – ಬಿಸಿ ಆಹಾರವನ್ನು ಮನೆ ಬಾಗಿಲಿಗೆ, ಗ್ರಾಹಕರಿಗೆ ವಿತರಿಸುವ ಸೌಲಭ್ಯದ ಜನಪ್ರಿಯತೆ ಹೆಚ್ಚಳ, ಮಹಾನಗರಗಳು ಮತ್ತು 2ನೇ ಶ್ರೇಣಿಯ ಮಾರುಕಟ್ಟೆಗಳಲ್ಲಿ ಹೆಚ್ಚಿನ ಪುನರಾವರ್ತಿತ ಉಪಭೋಗದ ಕಾರಣಕ್ಕೆ ದಕ್ಷಿಣ ಭಾರತವು ಬ್ರ್ಯಾಂಡ್‌ಗೆ ವಹಿವಾಟು ಬೆಳವಣಿಗೆಯ ಪ್ರಮುಖ ಎಂಜಿನ್ ಆಗಿ ಮುಂದುವರೆದಿದೆ.

ಈ ಹೊಸ ಅಡುಗೆಮನೆಯು ಲೆನೆಕ್ಸಿಸ್ ಫುಡ್‌ವರ್ಕ್ಸ್ ಅಡಿಯಲ್ಲಿ ಚೈನೀಸ್ ವೋಕ್, ಬಿಗ್ ಬೌಲ್ ಮತ್ತು ದಿ ಮೊಮೊ ಕಂಪನಿ ಸೇರಿದಂತೆ ಬಹು ಬ್ರಾಂಡ್‌ಗಳಿಗೆ ಸೇವೆ ಸಲ್ಲಿಸಲಿದೆ.

ಹೊಸ ಮಳಿಗೆ ಆರಂಭಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ಲೆನೆಕ್ಸಿಸ್ ಫುಡ್‌ವರ್ಕ್ಸ್‌ನ ಸಂಸ್ಥಾಪಕ ಮತ್ತು ನಿರ್ದೇಶಕ ಆಯುಷ್ ಮಧುಸೂದನ್ ಅಗರವಾಲ್ ಅವರು, “ಹುಬ್ಬಳ್ಳಿ ಮಹಾನಗರವು ನಮಗೆ ಪ್ರಮುಖ ಮಾರುಕಟ್ಟೆಯಾಗಿದೆ. ಇಲ್ಲಿ ನಮ್ಮ ಮೊದಲ ಮಳಿಗೆ ಆರಂಭಿಸಲು ನಮಗೆ ಸಂತಸವಾಗುತ್ತಿದೆ. ಹುಬ್ಬಳ್ಳಿಯಂತಹ ನಗರಗಳು ಸಂಘಟಿತ ಊಟ ಮತ್ತು ಆಧುನಿಕ ಕ್ಯುಎಸ್‌ಆರ್ ಸ್ವರೂಪಗಳಲ್ಲಿ ತ್ವರಿತ ಬೆಳವಣಿಗೆ ಕಾಣುತ್ತಿವೆ. ಇಂತಹ ಮಾರುಕಟ್ಟೆಗಳಿಗೆ ನಮ್ಮ ಸೇವೆ – ವಹಿವಾಟು ವಿಸ್ತರಣೆಯು ನಮ್ಮ ಕಾರ್ಯತಂತ್ರದ ಪ್ರಮುಖ ಭಾಗವಾಗಿದೆ. ಇನಾರ್ಬಿಟ್ ಮಾಲ್‌ನಲ್ಲಿರುವ ಹೊಸ ಮಳಿಗೆಯೊಂದಿಗೆ, ಹುಬ್ಬಳ್ಳಿಯ ನಿವಾಸಿಗಳಿಗೆ ಹಣಕ್ಕೆ ತಕ್ಕ ಮೌಲ್ಯ, ಅನುಕೂಲತೆ ಮತ್ತು ಉತ್ತಮ ಗುಣಮಟ್ಟದ ಊಟದ ಅನುಭವದೊಂದಿಗೆ ನಮ್ಮ ವಿಶಿಷ್ಟ ದೇಸಿ ಚೈನೀಸ್ ಸವಿರುಚಿಗಳನ್ನು ಪರಿಚಯಿಸಲು ನಾವು ಎದುರು ನೋಡುತ್ತಿದ್ದೇವೆ” ಎಂದು ಹೇಳಿದ್ದಾರೆ.

ಹೊಸ ಮಳಿಗೆಯು ಬರ್ನ್ಟ್ ಗಾರ್ಲಿಕ್ ಫ್ರೈಡ್ ರೈಸ್, ಹಕ್ಕಾ ನೂಡಲ್ಸ್, ಚೌಮೆನ್, ಕುರ್ಕುರೆ ಮೊಮೊಸ್, ಆರು ಬಗೆಯ ಸಾಸ್‌ಗಳು ಮತ್ತು 12 ಸೇವರ್ ಕಾಂಬೊಗಳಂತಹ ಜನಪ್ರಿಯ ಆಹಾರ ಬಗೆಗಳನ್ನು ವ್ಯಾಪಕ ಶ್ರೇಣಿಯಲ್ಲಿ ಒದಗಿಸಲಿದೆ. ಹೊಸ ಗ್ರಾಹಕರು ₹ 99 ರಿಂದ ಪ್ರಾರಂಭವಾಗುವ ಸೂಪರ್‌ಬೌಲ್ ಖರೀದಿಸಬಹುದು, fಇದು ಚೈನೀಸ್ ವೋಕ್ ಸೇವೆಯ ರುಚಿ ನೋಡಲು ಸುಲಭದ ಆರಂಭಿಕ ಹಂತವಾಗಿದೆ.

ವರದಿ:ಸುಧೀರ್ ಕುಲಕರ್ಣಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!