ವಿಜಯಪುರ :ಚಡಚಣ ತಾಲೂಕಿನ ಗೋಟ್ಯಾಳ ಗ್ರಾಮದ ತೋಟದಲ್ಲಿ ಪತ್ತೆಯಾದ ರಣಹದ್ದು,ಟ್ರ್ಯಾಕರ್, ಜಿಪಿಎಸ್ ಹಾಗೂ ಕೆಮೆರಾ ಮಾದರಿಯ ವಸ್ತುವನ್ನು ಹೊಂದಿದ್ದ ಪಕ್ಷಿ.ರಣಹದ್ದಿನ ಕಾಲಿಗೆ ಗುರುತಿನ ಸಂಖ್ಯೆಯ ಟ್ಯಾಗ್ ಅಳವಡಿಸಿದ್ದು ಕಂಡು ಬಂದಿದೆ
ರಣಹದ್ದು ಕಂಡು 112 ಗೆ ಕರೆ ಮಾಡಿದ ಸ್ಥಳಿಯರು.ಸ್ಥಳಕ್ಕೆ ತೆರಳಿ ರಣಹದ್ದನ್ನು ವಶಕ್ಕೆ ಪಡೆದ 112 ಪೊಲೀಸರು
ಝಳಕಿ ಪೊಲೀಸ್ ಠಾಣೆಯಲ್ಲಿ ರಣಹದ್ದನ್ನು ಇರಿಸಿದ 112 ಪೊಲೀಸರು,ಝಳಕಿ ಪೊಲೀಸ್ ಠಾಣೆಗೆ ಅರಣ್ಯಾಧಿಕಾರಿಗಳ ಭೇಟಿ ಪರಿಶೀಲನೆ
ಮಹಾರಾಷ್ಟ್ರದ ನಾಗಪೂರ ಬಳಿಯ ಮೇಲಘಾಟ ಪ್ರದೇಶದಿಂದ ಬಂದಿದ್ದ ರಣಹದ್ದು,
ಜಿಪಿಎಸ್, ಟ್ರ್ಯಾಕರ್ ಭಾರವಾದ ಕಾರಣ ಬಸವಳಿದಿದ್ದ ಪಕ್ಷಿ,ಮಹಾರಾಷ್ಟ್ರದ ಅರಣ್ಯ ಇಲಾಖೆಯಿಂದ ರಣಕದ್ದಿಗೆ ಜಿಪಿಎಸ್ ಹಾಗೂ ಟ್ರ್ಯಾಕರ್ ಅಳವಡಿಸಿದ್ದಾರೆಂಬ ಮಾಹಿತಿ
ರಣಹದ್ದುಗಳ ಜೀವನ ಶೈಲಿ ಹಾಗೂ ಇತರೆ ಪಕ್ಷಿಗಳ ಮಾಹಿತಿ ಪಡೆಯೋಕೆ ಪ್ರಯತ್ನ,ರಣಹದ್ದು ಸಂಖ್ಯೆ ಕಡಿಮೆಯಾಗಿರೋ ಕಾರಣ ಹೆಚ್ಚಿನ ಮಾಹಿತಿ ಪಡೆಯೋಕೆ ಮಾಹಾರಾಷ್ಟ್ರ ಅರಣ್ಯಾಧಿಕಾರಿಗಳ ಯೋಜನೆ,ರಣಹದ್ದನ್ನು ತಮ್ಮ ಸುಪರ್ಧಿಗೆ ಪಡೆದ ವಿಜಯಪುರ ಜಿಲ್ಲಾ ಅರಣ್ಯಾಧಿಕಾರಿಗಳು,ರಣಹದ್ದಿಗೆ ಆರೈಕೆ ಮಾಡುತ್ತಿರೋ ಅಧಿಕಾರಿಗಳು,ನಂತರ ಮಹಾರಾಷ್ಟ್ರದ ಅರಣ್ಯಾಧಿಕಾರಿಗಳ ಜೊತೆಗೆ ಸಂಪರ್ಕಿಸಿ ಮಾಹಿತಿ ನೀಡಿದ ಅಧಿಕಾರಿಗಳು,ಸದ್ಯ ರಣಹದ್ದಿನ ಆರೋಗ್ಯ ಸ್ಥಿತಿಗತಿ ನೋಡಿಕೊಂಡು ಹಾರಿ ಬಿಡಲು ಚರ್ಚೆ
ಮಹಾರಾಷ್ಟ್ರದ ಅರಣ್ಯಾಧಿಕಾರಿಗಳ ಸೂಚನೆ ಮೇರೆಗೆ ಕ್ರಮ ತೆಗೆದುಕೊಳ್ಳಲಿರೋ ವಿಜಯಪುರ ಜಿಲ್ಲಾ ಅರಣ್ಯಾಧಿಕಾರಿಗಳು

ವರದಿ:ಶ್ರೀಕಾಂತ ಬಗಲಿ




