ವಿವೇಕವಿಲ್ಲದ ಮುಂಗೋಪಿ ಪುರುಷರು ಮಾಡುವ ಎಡವಟ್ಟುಗಳು ಎಂಥೆAಥ ದರ‍್ಘಟನೆಗಳಿಗೆ ಕಾರಣವಾಗುತ್ತವೆ ಎಂಬುದಕ್ಕೆ ಮತ್ತೊಂದು ಉದಾಹರಣೆ ಮಧ್ಯಪ್ರದೇಶದ ಭೋಪಾಲ್‌ನಿಂದ ಬೆಳಕಿಗೆ ಬಂದಿದೆ.
ಕ್ಷÄಲ್ಲಕ ಕಾರಣಕ್ಕೆ ಪತಿಯರ‍್ವ ಮಗುವಿಗೆ ಹಾಲು ಕುಡಿಸುತ್ತಿದ್ದ ಪತ್ನಿ ಮೇಲೆ ಹಲ್ಲೆ ಮಾಡಿ ಪತ್ನಿ ಸಾವಿಗೆ ಕಾರಣವಾಗಿದ್ದಾನಲ್ಲದೇ ೬ ತಿಂಗಳು ಮಗು ಕೂಡ ಸಾವನ್ನಪ್ಪುವಂತೆ ಮಾಡಿದ್ದಾನೆ ಈ ಕ್ರೂರಿ ಮನುಷ್ಯ.
ಪತ್ನಿಗೆ ಹಲ್ಲೆ ನಡೆಸುವ ಸಮಯದಲ್ಲಿ ಉಸಿರುಗಟ್ಟಿ ೬ ತಿಂಗಳು ಹಸುಗೂಸು ಕೂಡ ಧಾರುಣ ಸಾವು ಕಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯ ಪತಿ ಸುನಿಲ್ ಎಂಬಾತ ಶವಗಳ ಬಳಿ ಕುಳಿತಿದ್ದು, ಕಂಡು ಬಂದಿದ್ದು, ಅನುಮಾಣದ ಮೇಲೆ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಮಹಿಳೆಯ ದೇಹದ ಮೇಲೆ ಹಲವು ಗಾಯದ ಗುರುತುಗಳು ಕಂಡು ಬಂದಿವೆ ಎಂದ ಪೊಲೀಸರು ತಿಳಿಸಿದ್ದಾರೆ.



