ಕಲಘಟಗಿ : ಪ್ರಾಥಮಿಕ ಆರೋಗ್ಯ ಕೇಂದ್ರ ಮುಕ್ಕಲ ಮತ್ತು ಹುಬ್ಬಳ್ಳಿಯ ಆಯುರ್ವೇದ ಮಹಾವಿದ್ಯಾಲಯ ಹೇಗೇರಿ, ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ನಿಮಿತ್ತ ತಾಲೂಕಿನ ಮುಕ್ಕಲ ಆರೋಗ್ಯ ಕೇಂದ್ರದಲ್ಲಿ ಬ್ರಹತ್ ಆರೋಗ್ಯ ಶಿಬಿರ ಏರ್ಪಡಿಸಲಾಗಿತ್ತು.
ಶಿಬಿರವನ್ನು ಉದ್ಗಾಟಿಸಿ ಮಾತನಾಡಿದ ರೋಗ ನಿಧಾನ ವಿಭಾಗದ ಮುಖ್ಯಸ್ತೇ ಡಾ ಮುಮ್ತಾಜ್ ವಾಲಿಕಾರ್, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂಧಿ ಮತ್ತು ಡಾ ರವಿ ಸೋಮಣ್ಣವರ ಅವರ ಸೇವೆ ಮತ್ತು ಉತ್ತಮ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ,ಮುಕ್ಕಲ ಆರೋಗ್ಯ ಕೇಂದ್ರದಲಿ ಈ ಮುಂಚೆ ಕಾರ್ಯನಿರ್ವಹಿಸಿ ಜನ ಮನ್ನಣೆಗಳಿಸಿದ್ದ ಆಯುಷ್ ವೈಧ್ಯ ಡಾ ನವನೀತ್ ಜೋಶಿ ಅವರನ್ನು ಅಬಿನಂದಿಸಿದರು.
ಡಾ ರವಿ ಸೋಮಣ್ಣವರ ಮಾತಮಾಡಿ ಉದಯೋನ್ಮುಖ ವೈಧ್ಯರ ಕಲಿಕಾ ಮನೋಭಾವ ಮುಕ್ತವಾಗಿದ್ದು ಒಳ್ಳೆಯ ಬೆಳವಣಿಗೆ ಎಂದು ಶ್ಲಾಘಿಸಿದರು. ಯುವ ವೈಧ್ಯರು ಗ್ರಾಮೀಣ ಸೇವೆಯ ಕಡೆಗೆ ಹೆಚ್ಛು ಒಲವು ತೋರಿಸಬೇಕು ಎಂದು ಕರೆ ಕೊಟ್ಟರು. ಹಿರಿಯ ವೈಧ್ಯರಾದ ಡಾ ಮಹಿಮಾ ಬೀ, ಡಾ ಸಚಿನ ಎಮ್ ಆರೋಗ್ಯ ಶಿಬಿರವನ್ನು ಯಶಸ್ವಿ ಅಗಿ ನಡೆಸಿಕೊಟ್ಟರು. ಒಟ್ಟು 350 ಕ್ಕೂ ಹೆಚ್ಚು ರೋಗಿಗಳು ಶಿಬಿರದ ಲಾಭ ಪಡೆದರು. ವೈಧ್ಯರಾದ ಡಾ ದರ್ಶನ, ಡಾ ಚನ್ನಗೌಡ, ಡಾ ಮೈಲಾರಿ, ಡಾ ವಿವೇಕ್, ಡಾ ಸೌಮ್ಯ ಪಾಟೀಲ್, ಡಾ ಸೌಮ್ಯ ದೇಸಾಯಿ, ಡಾ ಶಿಲ್ಪಾ ಜೈ, ಡಾ ಪಾರ್ವತಿ, ಡಾ ಸುಶ್ಮಿತಾ, ಡಾ ಪ್ರೀತಮ್, ಡಾಚನ್ನಬಸವ ಹಾಜರಿದ್ದರು.
ವರದಿ : ನಿತೀಶಗೌಡ ತಡಸ ಪಾಟೀಲ್




