ಸೇಡಂ : ತಾಲೂಕಿನ ಸಿಲಾರಕೋಟ್ ಗ್ರಾಮದ ನಿವಾಸಿಯಾದ ಚಂದ್ರಯ್ಯ ತಂದೆ ಉಷಪ್ಪ ಎಂಬುವವರು ಪ್ರತಿತಿಂಗಳು ವಿದ್ಯುತ್ ಬಿಲ್ ತುಂಬುತ್ತಿದ್ದರು ಕೂಡ ಇದ್ದಕ್ಕಿದ್ದಂತೆ ವಿದ್ಯುತ್ ಒಮ್ಮೆ ಸರಿಸುಮಾರು 13ಸಾವಿರಕ್ಕಿಂತ ಹೆಚ್ಚು ಬಿಲ್ ಬಂದಿರುವುದು ನೋಡಿ ಚಂದ್ರಯ್ಯ ಆತಂಕಕ್ಕೆ ಗುರಿಯಾಗಿದ್ದಾರೆ.

ಬಿಲ್ ಕಂಡು ಗಾಬರಿಯಾಗಿದ್ದ ಚಂದ್ರಯ್ಯ ಅವರು ಬಿಲ್ ರೀಡಿಂಗ್ ಕೊಟ್ಟಿರುವ ಸಂತೋಷ ಢಗೆ ಅವರನ್ನು ತರಾಟೆಗೆ ತಗೊಂಡು ವಾದಮಾಡಿದರು, ಸಂತೋಷ ಅವರು ನೀಡಿರುವ ಮಾಹಿತಿ ಪ್ರಕಾರ ಚಂದ್ರಯ್ಯ ಅವರು ಸಹಾಯಕ ಕಾರ್ಯನಿರವಾಹಕ ಅಭಿಯಂತರಿಗೆ ಪರಿಶೀಲನೆ ನಡೆಸಿ ಬಿಲ್ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಪತ್ರ ನೀಡಿ ತನ್ನ ಅಳಲನ್ನು ತೋಡಿಕೊಂಡಿದ್ದರು ಆದರೆ ಇದುವರೆಗೆ ಅದಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಬಿಲ್ ನಲ್ಲಿ ಇರುವಷ್ಟು ಹಣ ತುಂಬಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ ಎಂದು ಚಂದ್ರಯ್ಯ ಅವರು ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದರು.
ಪ್ರತಿ ತಿಂಗಳು 1500ರೂಪಾಯಿಗಿಂತ ಕಡಿಮೆ ಬಿಲ್ ಬರುತ್ತಿದ್ದು ಈಗ ಏಕಾಏಕಿ 13ಸಾವಿರ ರೂಪಾಯಿ ಬಂದಿದೆ ಎಂದು ಚಂದ್ರಯ್ಯ ಅವರು ಪತ್ರಿಕಾ ಪ್ರಕಟಣೆಗೆ ಮಾಹಿತಿ ನೀಡಿದ್ದಾರೆ.
ಮೀಟರ್ ಪರಿಶೀಲನೆ ನಡೆಸದೆ ವಿಳಂಬ ಮಾಡುತಿದ್ದಲ್ಲದೆ ಎಷ್ಟು ಬಿಲ್ ಬಂದಿರುವುದೋ ಅಷ್ಟು ಹಣ ಕಟ್ಟಬೇಕೆಂದು ಒತ್ತಾಯಿಸುತ್ತಿದ್ದಾರೆ ದಯವಿಟ್ಟು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ತನ್ನ ಅಳಲನ್ನು ತಿಳಿಸಿದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.




