Ad imageAd image

ಯರಿಯೂರು ಗ್ರಾಮದಲ್ಲಿ ಶಾಸಕ ಪುಟ್ಟರಂಗಶೆಟ್ಟಿ ರವರಿಂದ ಭಗೀರಥಮಹರ್ಷಿ ಮೂರ್ತಿ ಅನಾವರಣ

Bharath Vaibhav
ಯರಿಯೂರು ಗ್ರಾಮದಲ್ಲಿ ಶಾಸಕ ಪುಟ್ಟರಂಗಶೆಟ್ಟಿ ರವರಿಂದ ಭಗೀರಥಮಹರ್ಷಿ ಮೂರ್ತಿ ಅನಾವರಣ
WhatsApp Group Join Now
Telegram Group Join Now

ಯಳಂದೂರು  : ಚಾಮರಾಜನಗರ ಜೆಲ್ಲೆಯ ಯಳಂದೂರು ತಾಲ್ಲೋಕು ಯರಿಯೂರು ಗ್ರಾಮದಲ್ಲಿ ಭಗೀರಥ ಮಹರ್ಷಿಯ ಮೂರ್ತಿಯನ್ನ ರಾಜ್ಯ ಉಪಾರ ಸಮಾಜದ ಅಧ್ಯಕ್ಷರು ಚಾಮರಾಜನಗರ ಶಾಸಕರಾದ ಪುಟ್ಟರಂಗಶೆಟ್ಟಿ ರವರು ಅನಾವರಣ ಮಾಡಿದರು

101 ಹೆಣ್ಣುಮಕ್ಕಳು ಕಳಸವನ್ನು ಹೊತ್ತುಕೊಂಡು ಸತ್ತಿಗೆ ಸೂರಿಪಾನಿ, ಛತ್ರಿ ಚಾಮರ ಮಂಗಳವಾದ್ಯದ ಮೂಲಕ ಶ್ರೀ ಭಗೀರಥ ಮಹರ್ಷಿ ಫೋಟೋವನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು

ಜಿಲ್ಲಾ ಪಂಚಾಯಿತಿಯ ಮಾಜಿ ಉಪಾಧ್ಯಕ್ಷರಾದ ಜಿ ಯೋಗೇಶ್ ರವರು ಮೂರ್ತಿಗೆ ಪುಷ್ಪಾರ್ಚನೆ ನೆರವೇರಿಸಿದರು.

ನಂತರ ಚಾಮರಾಜನಗರದ ಶಾಸಕರಾದ ಸಿ ಪುಟ್ಟರಂಗ ಶೆಟ್ಟಿ ಅವರು ಮಾತನಾಡಿ ಯರಿಯೂರು ಗ್ರಾಮದಲ್ಲಿ ನಮ್ಮ ಮೂಲಪುರುಷ ಮಹಾರಾಜ ಭಗೀರಥಮಹರ್ಷಿಯ ಮೂರ್ತಿಯನ್ನ ಪ್ರತಿಷ್ಠಾಪನೆ ಮಾಡಿದರೆ ನಾವು ಸೂರ್ಯ ವಂಶಸ್ಥರು ನಾವು ಹೆಚ್ಚಾಗಿ ಭಗೀರಥ ಮಹರ್ಷಿಯನ್ನೇ ಪೂಜಿಸುತ್ತಾ ಬರುತ್ತಿದ್ದೇವೆ ಧರೆಗೆ ಗಂಗೆಯನ್ನು ಇಳಿಸಿದಂತಹ ಮಹಾ ಪುರುಷ ಇವತ್ತು ಈ ಮೂರ್ತಿಯನ್ನು ಅನಾವರಣ ಮಾಡುತ್ತಿರುವುದು ನನಗೆ ತುಂಬಾ ಖುಷಿಯಾಗಿದೆ ನಮ್ಮ ಸಮಾಜದಲ್ಲಿ ಕೆಲವು ಮೂಢನಂಬಿಕೆಗಳಿದೆ ಅವುಗಳನ್ನೆಲ್ಲ ಈ ಭಗೀರಥ ಮಹರ್ಷಿ ಹೋಗಲಾಡಿಸಲಿ ಎಂದು ತಿಳಿಸಿದರು

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಜಿ ಯೋಗೇಶ್ ರವರು ಮಾತನಾಡಿ ಇಂದು ಯರಿಯೂರು ಗ್ರಾಮದಲ್ಲಿ ಒಳ್ಳೆಯ ದಿನ ಭಗೀರಥಮಹರ್ಷಿ ರವರ ಮೂರ್ತಿಯನ್ನು ಕಿರಣ್ ರವರು ತಮ್ಮ ಸ್ವಂತ ಜಾಗದಲ್ಲಿ ಊರಿನ ಜನರು ಹಾಗೂ ಕಿರಣ್ ರವರ ತಂಡ ನಿರ್ಮಿಸಿದರೆ ಅವರಿಗೆ ಅಭಿನಂದಿಸುತ್ತೇನೆ ಚಾಮರಾಜನಗರ ಜಿಲ್ಲೆಯಾದ್ಯಂತ ಮುಖ್ಯ ರಸ್ತೆಗಳಲ್ಲಿ ಕಾಣುವಂತೆ ಉಪ್ಪಾರ ಜನಾಂಗದವರು ಭಗಿರಥ ಮೂರ್ತಿಯನ್ನು ನಿರ್ಮಾಣ ಮಾಡಲಿ ಎಂದು ತಿಳಿಸಿದರು

ಯುವ ಮುಖಂಡರಾದ ಕುಸುಮರಾಜ್ ರವರು ಮಾತನಾಡಿ ನಮ್ಮ ಕುಲ ಗುರುಗಳಾದ ಭಗೀರಥ ಮಹರ್ಷಿ ರವರ ಮೂರ್ತಿಯನ್ನ ನಮ್ಮ ಯಳಂದೂರು ತಾಲೂಕಿನಲ್ಲಿ ತುಂಬಾ ಚೆನ್ನಾಗಿ ನಿರ್ಮಾಣ ಮಾಡಿರುವುದು ಇದೇ ಮೊದಲು ನಾನು ಇದಕ್ಕೆ ಯರಿಯೂರು ಗ್ರಾಮದ ಎಲ್ಲ ಜನತೆಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಭಗಿರಥ ಮಹರ್ಷಿಯು ಛಲ ಬಿಡದೆ ಭೂಮಿಗೆ ನೀರು ತಂದ ರೀತಿಯಲ್ಲಿ ನಮ್ಮ ಸಮಾಜದ ಜನರಿಗೆ ಛಲ ಬರಲಿ ಎಂದು ತಿಳಿಸಿದರು

ಈ ಸಂದರ್ಭದಲ್ಲಿ ಭಗೀರಥ ಸಮಾಜದ ಯಜಮಾನರುಗಳು,ಮುಖಂಡರುಗಳು,ಹಾಗೂ ಯುವಕರು ಹಾಜರಿದ್ದರು.

ವರದಿ : ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!