ಚಿಟಗುಪ್ಪ :ತಾಲ್ಲೂಕಿನ ತಾಳಮಡಗಿ ಮತ್ತು ಮಂಗಲಗಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 65 ರಲ್ಲಿ ಬೈಕ್ ನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಗಳಿಗೆ ಗಾಳಿಪಟದ ದಾರದಿಂದ ಜರುಗಿದ ಅಘಾತಕಾರಿ ಘಟನೆಗಳಿಂದ ಮುನ್ನೆಚ್ಚರಿಕೆ ಕ್ರಮ ವಹಿಸಲಾಯಿತು.
ಶುಕ್ರವಾರ ಡಿವೈಎಸ್ಪಿ ಮಡೋಳಪ್ಪ ಮಾರ್ಗದರ್ಶನದಲ್ಲಿ ಪಿಎಸ್ಐ ಮಹೇಂದ್ರಕುಮಾರ ನೇತೃತ್ವದಲ್ಲಿ ಪೊಲೀಸ್ ಹಾಗೂ ಟೋಲ್ ಪ್ಲಾಜ ಸಿಬ್ಬಂದಿಗಳಿಂದ ತಾಳಮಡಗಿ ಹಾಗೂ ಮಂಗಲಗಿ ಸೇತುವೆ ಮೇಲೆ ಗಾಳಿಪಟ ದಾರವನ್ನು ಹುಡುಕಿ ಸಿಕ್ಕ ಗಾಳಿಪಟ ಹಾಗೂ ದಾರವನ್ನು ತೆಗೆದು ರೋಡ್ ಸವರಾರಿಗೆ ತೊಂದರೆ ಆಗದಂತೆ ಕ್ರಮ ವಹಿಸಲಾಯಿತು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಮಡೋಳಪ್ಪ, ಪಿಎಸ್ಐ ಮಹೇಂದ್ರಕುಮಾರ,ಮಂಗಲಗಿ ಟೋಲ್ ಪ್ಲಾಜ ಅಧಿಕಾರಿಗಳಾದ ಸೋಮನಾಥ ಶಾಸ್ತ್ರಿ,ರೇವಣಸಿದ್ದಪ್ಪ ವಾಲಿ, ಪೊಲೀಸ್ ಸಿಬ್ಬಂದಿಗಳಾದ ರಾಜರೆಡ್ಡಿ, ಮಾರುತರೆಡ್ಡಿ, ತಾಜೋದ್ದಿನ ಸೇರಿ ಇತರರು ಇದ್ದರು.
ವರದಿ:ಸಜೀಶ್ ಲಂಬುನೋರ್




