ಗದಗ : ಜಿಲ್ಲೆಯ ಐತಿಹಾಸಿಕ ಗ್ರಾಮ ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯ ನಡೆಯುತ್ತಿದೆ. ಈಗ ಗ್ರಾಮವನ್ನು ಸ್ಥಳಾಂತರಿಸುವ ಯಾವುದೇ ಪ್ರಸ್ತಾಪವಿಲ್ಲ. ನಡೆಯುತ್ತಿರುವ ಉತ್ಖನನದ ವೇಳೆ ಮಹತ್ವದ ಅವಶೇಷ ಸಿಕ್ಕರೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಎನ್ ಶ್ರೀಧರ್ ಅವರು ತಿಳಿಸಿದ್ದಾರೆ.ಈ ಮೂಲಕ ಗ್ರಾಮವನ್ನು ಸ್ಥಳಾಂತರಿಸುವ ಮುನ್ಸೂಚನೆ ನೀಡಿದ್ದಾರೆ.
ಇದೀಗ ಲಕ್ಕುಂಡಿಯಲ್ಲಿ ಉತ್ಖನನ ಕಾರ್ಯ ನಡೆಯುತ್ತಿದೆ. ಉತ್ಖನನ ವೇಳೆ ಪುರಾತನ ವಸ್ತು ಒಂದು ಪತ್ತೆಯಾಗಿದ್ದು, ಕೋಟೆ ವೀರಭದ್ರೇಶ್ವರ ದೇವಸ್ಥಾನದ ಬಳಿ ಉತ್ಖನನ ಕಾರ್ಯ ನಡೆಸಲಾಯಿತು. ಈ ವೇಳೆ ಎರಡನೇ ದಿನದ ಉತ್ಕನ ಕಾರ್ಯದ ವೇಳೆ ಪುರಾತನ ಮಸ್ತು ಒಂದು ಪತ್ತೆಯಾಗಿದೆ.
ನಿಧಿ ಪತ್ತೆಯ ಬಳಿಕ ಲಕ್ಕುಂಡಿಯಲ್ಲಿ ಪುರಾತನ ಮತ್ತು ಪತ್ತೆಯಾಗಿದೆ. ಪತ್ತೆಯಾದ ಪುರಾತನ ವಸ್ತು ಕುತೂಹಲಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ಮತ್ತಷ್ಟು ನಿಧಿ ಸಿಕ್ಕರೆ, ಇಡೀ ಗ್ರಾಮವೇ ಸ್ಥಳಾಂತರಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ




