ಕಲಘಟಗಿ :ತಾಲೂಕಿನ ದೇವಿಕೋಪ್ಪ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ ಗಿರಿಜಾ ಪಲ್ಲಕ್ಕಿ ಅವರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರೋಗ್ಯ ಶಿಕ್ಷಣ ಕಾರ್ಯಕ್ರಮ ಉದ್ಗಾಟಿಸಿ ಕಿಶೋರಿಯರಿಗೆ, ಹದಿಹರೆಯದವರ ಆರೋಗ್ಯ ಸಮಸ್ಯೆ ಕುರಿತು ಮಾಹಿತಿ ನೀಡಿದರು. ಕಿಶೋರಿಯರು ತಮ್ಮ ಆರೋಗ್ಯ ಸಮಸ್ಯೆಯನ್ನು ಮುಕ್ತವಾಗಿ ವೈದ್ಯರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು, ಆರೋಗ್ಯದ ವಿಷಯದಲ್ಲಿ ಹಿಂಜರಿಕೆ ಇರಬಾರದು ಎಂದು ತಿಳಿಸಿದರು.

ಕಾರ್ಯಗಾರದಲ್ಲಿ ಪೋಕ್ಸೋ ಕಾಯ್ದೆ ಮತ್ತು ಬಾಲ್ಯ ವಿವಾಹದ ಕುರಿತು ಸಾಕ್ಷ್ಯ ಚಿತ್ರ ಮೂಲಕ ತಿಳುವಳಿಕೆ ಸಹ ನೀಡಿದರು. ರಕ್ತ ಹೀನತೆ, ಮುಟ್ಟಿನ ಸಮಸ್ಯೆ, ವೈಯಕ್ತಿಕ ಸ್ವಚತೆ, ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಶಿಕ್ಷಕ ಶ್ರೀ ನಾಗಪ್ಪ ಮಣ್ಣಿಕೆರಿ ಉಪಸ್ತಿತರಿದ್ದರು, ಶ್ರೀಮತಿ ಲಕ್ಷ್ಮೀ ಅಂಗಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ವರದಿ :ನಿತೀಶಗೌಡ ತಡಸ ಪಾಟೀಲ್




