ಗುರುಮಠಕಲ್ : ಶನಿವಾರ ಹೈದರಾಬಾದ್ ನಗರದಲ್ಲಿ ಮಾದಿಗರ ಹೋರಾಟದ ಮುಂಚೂಣಿ ನಾಯಕರು ಹಾಗೂ ಒಳ ಮೀಸಲಾತಿ ಜಾರಿಗೆ ರೂವಾರಿ ಪದ್ಮಶ್ರೀ ಪುರಸ್ಕೃತ ಮಂದಕೃಷ್ಣ ಮಾದಿಗ ಅವರನ್ನು ಕರ್ನಾಟಕ ಮಾದಿಗ ದಂಡೋರ (MRPS) ರಾಜ್ಯಾಧ್ಯಕ್ಷರಾದ ಬಿ. ನರಸಪ್ಪ ದಂಡೋರ ಅವರು ನಗರದ ಸೆಂಟ್ರಲ್ ಕೋರ್ಟ್ ಬಳಿಯ ಖಾಸಗಿ ಹೋಟೆಲ್‌ನಲ್ಲಿ ಭೇಟಿಯಾಗಿ ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ಒಳ ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರ ಮಾಡಿದ ಎಡವಟ್ಟಿನಿಂದಾಗಿ ಗೌರವಾನ್ವಿತ ರಾಜ್ಯಪಾಲರ ಲೋಕಭವನದಿಂದ ಒಳ ಮೀಸಲಾತಿ ವರದಿ ವಾಪಸ್ ಹೋಗಿರುವ ವಿಷಯವನ್ನು ಮಂದಕೃಷ್ಣ ಮಾದಿಗರ ಗಮನಕ್ಕೆ ತರಲಾಯಿತು.

ಕರ್ನಾಟಕ ಕಾಂಗ್ರೆಸ್ ಸರ್ಕಾರವು ಪರಿಶಿಷ್ಟ ಜಾತಿಗೆ ಒಳಪಡುವ 101 ಜಾತಿಗಳಿಗೆ ನ್ಯಾಯ ಒದಗಿಸದೇ, ವೋಟ್ ಬ್ಯಾಂಕ್ ರಾಜಕೀಯ ನಡೆಸುತ್ತಿದ್ದು, ಮಾದಿಗರಿಗೆ ಮೋಸ ಮಾಡುವ ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಕರ್ನಾಟಕ ಮಾದಿಗ ದಂಡೋರ ರಾಜ್ಯ ಅಧ್ಯಕ್ಷ ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ವಿಚಾರ ಗಳ ಕುರಿತು ವಿವರಣೆಯಾಗಿ ಒಳ ಮೀಸಲಾತಿ ಸೇರಿದಂತೆ ಹಲವಾರು ಪ್ರಮುಖ ವಿಚಾರಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು. ಶೀಘ್ರದಲ್ಲೇ ಕರ್ನಾಟಕ ರಾಜ್ಯಕ್ಕೆ ಭೇಟಿ ನೀಡುವುದಾಗಿ ಪದ್ಮಶ್ರೀ ಮಂದಕೃಷ್ಣ ಮಾದಿಗರು ಬಿ. ನರಸಪ್ಪ ದಂಡೋರ ಅವರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಯಾದಗಿರಿ ಜಿಲ್ಲಾ ಅಧ್ಯಕ್ಷರಾದ ಕಾಶಪ್ಪ ಮಾದಿಗ ಹೆಗ್ಗಣಗೇರಾ, ರಾಯಚೂರು ಜಿಲ್ಲಾ ಯುವ ಸೇನೆ ಅಧ್ಯಕ್ಷರಾದ ರಂಜಿತ್ ದಂಡೋರ, ರಾಯಚೂರು ತಾಲೂಕು ಅಧ್ಯಕ್ಷರಾದ ದುಳ್ಳಯ್ಯ ಗುಂಜಹಳ್ಳಿ, ವಕೀಲರಾದ ಯೇಸುರಾಜು ಹಾಗೂ ಮಾದಿಗ ದಂಡೋರ ತಾಲೂಕು ಮುಖಂಡರಾದ ಭೀಮೇಶ್ ತುಂಟಾಪುರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ : ರವಿ ಬುರನೋಳ್




