ಸೇಡಂ : ತಾಲೂಕಿನ ಕದಲಾಪುರ ಗ್ರಾಮದ ಬಸ್ ನಿಲ್ದಾಣವು ಸಂಪೂರ್ಣ ಹದಗೆಟ್ಟು ಕುಸಿದು ಬೀಳುವ ಸ್ಥಿತಿಯಲ್ಲಿದೆ ಆದರೂ ಸಾರ್ವಜನಿಕರು ಅದೇ ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾದಿರುವುದು ಕಂಡುಬಂದಿದೆ.
ಗಡಿಭಾಗ ಗ್ರಾಮಗಳಲ್ಲಿ ಒಂದೊಂದ ಕದಲಾಪುರ ಗ್ರಾಮವು ಹೈದರಾಬಾದ್ – ಸೇಡಂ ಮುಖ್ಯರಸ್ತೆಗೆ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿರುವ ಗ್ರಾಮವಾಗಿದೆ.
ಜನರು ಈ ಗ್ರಾಮದಿಂದ ಬೇರೆ ಊರಿಗೆ ತೆರಳಲು ಕಾಲ್ನಡೆಯಿಂದ ಬರುತ್ತಾರೆ.
ಸರಿ ಸುಮಾರು ಎರಡು ಕಿಲೋಮೀಟರ್ ನಡೆದುಕೊಂಡು ಬಂದು ಬಸ್ ಗಾಗಿ ಕಾಯಬೇಕಾದರೆ ಬಸ್ ನಿಲ್ದಾಣ ಸಂಪೂರ್ಣ ಹದಗೆಟ್ಟಿದೆ ಇದರಿಂದ ಸಾರ್ವಜನಿಕರಿಗೆ ಅಪಘಾತವಾಗುವ ಸಾಧ್ಯತೆಯಿದೆ.
ಇದಕ್ಕೆ ಸಂಭಂದಪಟ್ಟ ಅದಿಕಾರಿಗಳು ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರ ಆಕ್ರೋಶವಾಗಿದೆ.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.




