Ad imageAd image

ಕೆಪಿಜೆಪಿ ಪಕ್ಷ ವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ

Bharath Vaibhav
ಕೆಪಿಜೆಪಿ ಪಕ್ಷ ವತಿಯಿಂದ ಸ್ವಾಮಿ ವಿವೇಕಾನಂದ ಜಯಂತಿ ಆಚರಣೆ
WhatsApp Group Join Now
Telegram Group Join Now

ಬೆಂಗಳೂರು: ಹೆಗ್ಗನಹಳ್ಳಿಯ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷದ ಪ್ರದಾನ ಕಚೇರಿಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಪುತ್ತೂರು ಮುತ್ತು ಮಹೇಶ್ ಗೌಡ ಅವರ ನೇತೃತ್ವದಲ್ಲಿ ಸ್ವಾಮಿ ವಿವೇಕಾನಂದ ಜಯಂತಿಯನ್ನು ಅರ್ಥಪೂರ್ಣವಾಗಿ ವಿನೂತನವಾಗಿ ಆಚರಣೆ ಮಾಡಲಾಯಿತು. ಸ್ವಾಮಿ ವಿವೇಕಾನಂದ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಹೇಶ್ ಗೌಡ ಮಾತನಾಡುತ್ತಾ ಸ್ವಾಮಿ ವಿವೇಕಾನಂದರು ಕಲ್ಕತ್ತದಲ್ಲಿ 1862 ಜನವರಿ 12ರಂದು ಜನಿಸಿದರು .

ಬಾಲ್ಯದಲ್ಲಿ ಅವರು ಉತ್ತಮ ವ್ಯಾಸಂಗ ಮಾಡಿ ಪಿಎಚ್ ಡಿಪದವಿ ಮುಗಿಸಿ ಸಾಂಸ್ಕೃತಿಕವಾಗಿ , ಧಾರ್ಮಿಕವಾಗಿ, ಆಧ್ಯಾತ್ಮಿಕವಾಗಿ, ಯುವ ಜನಾಂಗವನ್ನು ಹುಟ್ಟುಹಾಕಿ ದೇಶದಲ್ಲಿ ಯುವಶಕ್ತಿಯನ್ನು ಬಲಿಷ್ಠಗೊಳಿಸಿದರು ಅತ್ಯಂತ ಕಿರಿಯ 33 ವಯಸ್ಸಿನಲ್ಲಿ ಅವರು ಮರಣ ಹೊಂದಿದರು ಅವರ ಕೀರ್ತಿ ಯುವ ಜನತೆಗೆ ಆಶಾಕಿರಣವಾಗಿ ಬೆಳೆದರು ಎಂದು ಮಾತನಾಡಿದರು. ಹಾಗೆ ಪ್ರತಿ ವರ್ಷದಂತೆ ಮಾಗಡಿ ರಸ್ತೆಯ ಈಸ್ಟ್ ವೆಸ್ಟ್ ಕಾಲೇಜ್ ಹತ್ತಿರ ಇರುವ ಸಹನ ರಿಯಾಬಿಟೇಶನ್ ಕೇರ್ ಸೆಂಟರ್ ಮಕ್ಕಳಿಗೆ ಹಣ್ಣು ಅಕ್ಕಿ ಮೂಟೆ ವಿತರಿಸಿ ನಂತರ ಕಡಬಗೆರೆ ಕ್ರಾಸಿನಲ್ಲಿರುವ ಗಾಂಧಿ ವೃದ್ಧಾಶ್ರಮದ ದೇವರ ಮಕ್ಕಳಿಗೆ ಹಣ್ಣು ಅಕ್ಕಿ ಚೀಲ ವಿತರಿಸಿ. ನಂತರ ಕನ್ನಳ್ಳಿಯ ಶ್ರೀ ವೀರಭದ್ರೇಶ್ವರ ದೇವಸ್ಥಾನಕ್ಕೆ ಅಕ್ಕಿ ಮೂಟೆ ನೀಡಿ ಪ್ರಸಾದ ಸೇವಿಸಿ ಅಲ್ಲಿಯ ಭಕ್ತರಿಗೆ ಸಿಹಿ ಹಂಚಿದರು .

ಇದೇ ಸಂದರ್ಭದಲ್ಲಿ ಹಿರಿಯ ಮುಖಂಡರಾದ ನಿಂಗಪ್ಪ, ಮೂರ್ತಿ, ನಾಗೇಶ್, ನಾಗರಾಜು, ಡಿಎಸ್ಎಸ್ ಕುಮಾರ್, ಹಾಯ್ ಬೆಂಗಳೂರು ಪತ್ರಿಕೆಯ ಮುಖ್ಯ ವರದಿಗಾರ ಬಸವರಾಜ್ ಜಮಾದಾರ್ ಸೇರಿದಂತೆ ಕಾರ್ಯಕರ್ತರು ಮುಖಂಡರು ಮಕ್ಕಳು ಮುಂತಾದವರು ಉಪಸ್ಥಿತರಿದ್ದರು.
ವರದಿ: ಅಯ್ಯಣ್ಣ ಮಾಸ್ಟರ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!