ಬೆಂಗಳೂರು : ಕಾಂಗ್ರೆಸ್ ನಲ್ಲಿ ಇರುವ ನಾಯಕರೆಲ್ಲ ನಕಲಿ ಗಾಂಧಿಗಳು ನಾನು ಪೊಲೀಸರೇ ಕಳ್ಳರು ಅಂತ ವಿಧಾನಸಭೆಯಲ್ಲಿಯೇ ಹೇಳಿದ್ದೆ. ಕರ್ನಾಟಕ ರಾಜ್ಯದಲ್ಲಿ ಡ್ರಗ್ ಮಾಫಿಯಾ ಆವರಿಸಿದೆ ಕಾಲೇಜಿಗೆ ಹೋಗುವ ಶೇಕಡ 12ರಷ್ಟು ಮಕ್ಕಳು ಡ್ರಗ್ಸ್ ಸೇವಿಸುತ್ತಾರೆ ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ತಿಳಿಸಿದರು.
ಈ ವಿಚಾರವನ್ನು ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಿದ್ದೆ. ಡ್ರಗ್ಸ್ ಕಾನೂನು ಸುವ್ಯವಸ್ಥೆಗಳ ಬಗ್ಗೆ ಮಾತನಾಡಿದೆ.
ನನ್ನ ಪ್ರಶ್ನೆಗಳಿಗೆ ರಾಜ್ಯ ಸರ್ಕಾರ ಈಗ ಉತ್ತರ ನೀಡಿದೆ. ಎಲ್ಲಾ ಚೆನ್ನಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ. ಪೊಲೀಸ್ ಇಲಾಖೆಗೆ ಬೆತ್ತಲಾಗಿದೆ ಅಂತ ಸಿಎಂ ಸಿದ್ದರಾಮಯ್ಯ ತೋರಿಸಿದ್ದಾರೆ.
ನಿದ್ದೆರಾಮಯ್ಯನವರೇ ಎಂದು ಇಲಾಖೆಯ ವೈಫಲ್ಯ ಎದ್ದು ತೋರಿಸಿದ್ದಾರೆ. ಮಹಾರಾಷ್ಟ್ರ ಪೊಲೀಸರು ಇಲ್ಲಿಗೆ ಬಂದು ಡ್ರಗ್ ಫೆಡ್ಲರ್ ಗಳನ್ನು ಬಂಧಿಸುತ್ತಾರೆ ಅಂದರೆ ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದೆಯಾ? ಎಂದು ಬೆಂಗಳೂರಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದರು.




