ಬೈಲಹೊAಗಲ: ಸ್ವದೇಶಿ ಜೀವನ ಶೈಲಿ ಹಾಗೂ ನಾಗರಿಕ ಶಿಷ್ಟಾಚಾರಗಳ ಮೂಲಕ ಹಿಂದೂ ಸಮಾಜವನ್ನು ಒಗ್ಗೂಡಿಸಿ ಭಾರತವನ್ನು ವಿಶ್ವದಲ್ಲಿ ವೈಭವಿಕರಿಸೋಣ ಎಂದು ವಿಶ್ವ ಹಿಂದೂ ಪರಿಷತ್ ಕೇಂದ್ರೀಯ ಮಂತ್ರಿ ಹಾಗೂ ಶ್ರೀರಾಮ ಮಂದಿರ ನರ್ಮಾಣ ಉಸ್ತುವಾರಿ ಗೋಪಾಲಜಿ ನುಡಿದರು.
ನಗರದ ಕಿತ್ತೂರು ರಾಣಿ ಚನ್ನಮ್ಮ ಸಮಾಧಿ ಸ್ಥಳ ಎದುರು ಹಿಂದೂ ಸಮ್ಮೇಳನ ಸಂಚಾಲನಾ ಸಮಿತಿ ವತಿಯಿಂದ ನಡೆದ ವಿರಾಟ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಪರಾಕ್ರಮಗಳ ನಾಡಿನಲ್ಲಿ ಸಮ್ಮೇಳನ ನಡೆಯುತ್ತಿರುವುದು ಸಂತಸ ತಂದಿದೆ ಎಂದರಿ.
ಸಮ್ಮೇಳನ ಉಪಾಧ್ಯಕ್ಷೆ ಮೀನಾಕ್ಷಿ ಕುಡಸೋಮಣ್ಣವರ ಮಾತನಾಡಿದರು. ಸಮ್ಮೇಳನದ ಅಧ್ಯಕ್ಷ ಅದೃಶ್ಯಪ್ಪ ಸಿದ್ರಾಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಖಾ ಮೂರು ಸಾವಿರ ಮಠದ ಪ್ರಭು, ಹೊಸೂರ ಗಂಗಾಧರ ಸ್ವಾಮೀಜಿ, ಇಂಚಲದ ಪರ್ಣಾನಂದ ಸ್ವಾಮೀಜಿ, ಮಡಿವಾಳೇಶ್ವರ ಮಠದ ಮಡಿವಾಳೇಶ್ವರ ಸ್ವಾಮೀಜಿ, ಸಂಗೊಳ್ಳಿಯ ಗರುಲಿಂಗ ಶಿವಾಚರ್ಯ ಸ್ವಾಮೀಜಿ, ಜಾಕನಾಯಕನ ಕೊಪ್ಪ÷್ದ ಮಾತೋಶ್ರೀ ಶಿವಯೋಗಿನಿ ದೇವಿ, ವೀರಯ್ಯ ಹಿರೇಮಠ, ಈಶ್ವರಿಯ ವಿಶ್ವವಿದ್ಯಾಲಯದ ಬಿ.ಕೆ. ಪ್ರಭಾ ಅಕ್ಕನವರು ಸಾನ್ನಿಧ್ಯ ವಹಿಸಿ ಆಶರ್ವಚನ ನೀಡಿದರು.
ವಟುಗಳಿಂದ ಮಂತ್ರಘೋಷ ಮೊಳಗಿತು. ಪ್ರಗತಿ ಬಿಳ್ಕೋರ ಭರತನಾಟ್ಯ ಮಾಡಿದರು. ಗೌರವಾಧ್ಯಕ್ಷ ಎಂ.ವೈ. ಸೋಮಣ್ಣವರ ಸ್ವಾಗತಿಸಿದರು. ಗಿರಿಶ ಹರಕುಣಿ ನಿರೂಪಿಸಿದರು.



