ರಾಯಚೂರು :ಗ್ರಾಮಾಂತರ ಶಾಸಕರ ಕಾರ್ಯಾಲಯದಲ್ಲಿ ಪರಿಶಿಷ್ಟ ಜಾತಿಯ ಫಲಾನುಭವಿಗಳಿಗೆ ಬೋರ್ವೆಲ್ ಪಂಪ್ಸೆಟ್ ಸಾಮಗ್ರಿ ವಿತರಣೆ
ರಾಯಚೂರು ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬಡ ಪರಿಶಿಷ್ಟ ಜಾತಿಯ ಐದು ಎಕರೆ ಭೂಮಿ ಒಳಗೆ ಇರುವಂತಹ ಫಲಾನುಭವಿಗಳಿಗೆ ಈಗಾಗಲೇ ಭೂಮಿಯಲ್ಲಿ ಬೋರ್ವೆಲ್ ಗಳನ್ನು ಕೊರೆದಿದ್ದು ಬಹುದಿನಗಳಿಂದ ರೈತರ ಬೋರ್ವೆಲ್ ಗಳ ಬೇಡಿಕೆ ಇದ್ದು.
ಪರಿಶಿಷ್ಟ ಜಾತಿಯಲ್ಲಿ ಬೋರ್ವೆಲಗಳು ಬಹಳ ಕಡಿಮೆ ಇದ್ದು ಆದಿ ಜಾಂಬವ ಮತ್ತು ಅಂಬೇಡ್ಕರ್ ನಿಗಮ ಮತ್ತು ಬೇರೆ ಬೇರೆ ನಿಗಮಗಳಲ್ಲಿ ನಮ್ಮ ಪರಿಶಿಷ್ಟ ಜಾತಿಯನಿಗಮಗಳಲ್ಲಿ ನಮ್ಮ ರೈತರು ಬೆಳೆಗಳನ್ನು ಬೆಳೆಯಲು ಶಾಸಕರ ಕಾರ್ಯದಲ್ಲಿ ಫಲಾನುಭವಿಗಳಿಗೆ ಆರು ಬೋರ್ವೆಲ್ ಗಳ ಸಾಮಗ್ರಿ ಗಳನ್ನು ವಿತರಿಸಲಾಯಿತು.

ನನ್ನ ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಮಳೆಯ ಆಶ್ರಿತ ಭೂಮಿಗಳಾಗಿದ್ದು ಬೋರ್ವೆಲ್ ಗಳಿಂದ ಉತ್ತಮ ಬೆಳೆಯನ್ನು ಬೆಳೆಯಲು ಅನುಕೂಲ ಮಾಡಿಕೊಂಡು ರೈತರಿಗೆ ಉತ್ತಮ ಬೆಲೆ ಸಿಗಲೆಂದು ಮತ್ತು ರೈತರಿಗೆ ಬೋರ್ವೆಲ್ ನೀರಾವರಿಯಿಂದ ಅನುಕೂಲ ಮಾಡಿಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಿದ್ದನಗೌಡ ಪೊಲೀಸ್ ಪಾಟೀಲ್ ಮಲ್ಲಿಕಾರ್ಜುನ್ ಗೌಡ ತಲಮಾರಿ ಜನಾರ್ದನ ಗೌಡ ಹಂಚಿನಾಳ
ಯುಸುಫ್ ಅಲಿ. ನರಸಿಂಹ ನಾಯಕ್. ಶಿವಪ್ಪ ನಾಯಕ್. ತಿಮ್ಮಪ್ಪ ಆಲ್ಕೂರ್.ಫಲನು ಬಾವಿಗಳು.ಉಪಸ್ಥಿತರಿದ್ದರು.
ವರದಿ: ಗಾರಲದಿನ್ನಿ ವೀರನಗೌಡ




