ಗದಗ : ಲಕ್ಕುಂಡಿಯಲ್ಲಿ ಮನೆ ಕಟ್ಟಲು ಪಾಯ ಆಗಿರುವಾಗ ಚಿನ್ನ ಸಿಕ್ಕ ಬೆನ್ನಲ್ಲೆ, ರಾಜ್ಯ ಸರ್ಕಾರ ಇಡೀ ಗ್ರಾಮದಲ್ಲಿ ಉತ್ಖನನ ನಡೆಸಲು ನಿರ್ಧರಿಸಿದ್ದು ಇಂದು ನಾಲ್ಕನೇ ದಿನ ಉತ್ಪನನ ಕಾರ್ಯ ನಡೆಯುತ್ತಿದೆ.
ಇದೇ ವೇಳೆ ಅಲ್ಲಿಗೆ ಬಂದಂತಹ ಸ್ವಾಮೀಜಿ ಒಬ್ಬರು ನಾನು ನಿಂತ ಜಾಗದಲ್ಲಿ ಸಾವಿರ ಕೆಜಿ ಚಿನ್ನದ ಚಾಮುಂಡೇಶ್ವರಿ ಮೂರ್ತಿ ಇದೆ ಎಂದು ಹೈಡ್ರಾಮ ಮಾಡಿದ್ದಾರೆ.
ಲಕ್ಕುಂಡಿಯಲ್ಲಿ ನಾಲ್ಕನೇ ದಿನ ಉತ್ಖನ ಕಾರ್ಯ ಮುಂದುವರೆದಿದ್ದು, ಇದೆ ಸಂದರ್ಭದಲ್ಲಿ ಸ್ವಾಮೀಜಿ ಒಬ್ಬರು ಹೈಡ್ರಾಮಾ ಮಾಡಿದ್ದಾರೆ. ನಾನು ಪವಾಡ ಪುರುಷ ಅಂತ ಹೇಳಿಕೊಂಡು ಬಂದ ಸ್ವಾಮೀಜಿ ನಾನು ನಿಂತ ಜಾಗದಲ್ಲಿ ಮೈಸೂರು ಚಾಮುಂಡೇಶ್ವರಿ ಮೂರ್ತಿ ಇದೆ.
ಸಾವಿರ ಕೆಜಿಯ ಚಾಮುಂಡಿ ಮೂರ್ತಿ ಇದೆ. ಬಂಗಾರ, ವಜ್ರ ಖಚಿತ ಮೂರ್ತಿ ಇದೆ. 10 ಅಡಿ ಆಳ ತೆಗೆದರೆ ಮೂರ್ತಿ ಸಿಗುತ್ತೆ. ನಾನು ರಾಣಿ ಚೆನ್ನಮ್ಮನ ವಂಶಸ್ಥ ಎಸ್.ಸಿ ಹಿರೇಮಠ ಅಂತ ಸ್ವಾಮೀಜಿ ಈ ಒಂದು ಹೇಳಿಕೆ ಕೊಟ್ಟಿದ್ದಾರೆ.




