ಅರಸೀಕೆರೆ : ಸಮಾರಂಭದಲ್ಲಿ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಜಿಎಂ ರಾಜಶೇಖರ್ ಮಾತನಾಡಿದರು. ರಾಜ್ಯ ಸಂಘವು ಈಗಾಗಲೇ ರಾಜ್ಯದ್ಯಂತ 3000 ಸದಸ್ಯರನ್ನು ಒಳಗೊಂಡು ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.
ಪತ್ರಕರ್ತರ ಆರೋಗ್ಯ ದೃಷ್ಟಿಯಿಂದ ವಿಮಾ ಸೌಲಭ್ಯ ಪತ್ರಕರ್ತರ ಕ್ಷೇಮ ನಿಧಿ ಅಂದರ ಬಾಳಿಗೆ ಬೆಳಕಾಗಲು ನೇತ್ರದಾನ ಶಿಬಿರ ಪ್ರತಿವರ್ಷ ಸಾವಿರ ಸಸಿಗಳನ್ನು ನೀಡುವ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಂಡು ಬರವಣಿಗೆಯ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿ ಮುಂದಾಗಿದೆ.
ಪತ್ರಕರ್ತರು ವಸ್ತು ನಿಷ್ಠ ವರದಿ ಮಾಡುವ ಮೂಲಕ ಸಮಾಜದಲ್ಲಿ ವೃತ್ತಿ ಗೌರವವನ್ನು ಕಾಪಾಡಿಕೊಳ್ಳಬೇಕಿದೆ ಎಂದರು. ಅರಸೀಕೆರೆ ತಾಲೂಕಿನಲ್ಲಿ ಪತ್ರಿಕ ಭವನ ನಿರ್ಮಾಣ ನಿವೇಶನ ರೈತ ಪತ್ರಕರ್ತರಿಗೆ ನಿವೇಶನ ನೀಡುವಂತೆ ಗೃಹ ಮಂಡಳಿ ಅಧ್ಯಕ್ಷರಾದ ಕೆಎಂ ಶಿವಲಿಂಗೇಗೌಡರು ಮನವಿ ಮಾಡಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಾಜಿ ಗಿರೀಶ್ ನಗರಸಭೆ ಅಧ್ಯಕ್ಷರು ನಿಕಟ ಪೂರ್ವ ಅಧ್ಯಕ್ಷರಾದ ಶಮಿವುಲ್ಲಾ ಜಿವಿಟಿ ಬಸವರಾಜ್ ಬಿಜೆಪಿ ಮುಖಂಡರು ಕಿರಣ್ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರು ಮಂಜು ಮಲಿದೇವಳ್ಳಿ ಕರ್ನಾಟಕ ರಕ್ಷಣಾ ವೇದಿಕೆ ಉಪಾಧ್ಯಕ್ಷರು ಕರ್ನಾಟಕ ಮಾಧ್ಯಮ ಪತ್ರಿಕ ಸಂಘದ ಅರಸೀಕೆರೆ ಅಧ್ಯಕ್ಷರಾದ ವಿಶುಕುಮಾರ್ ಎಲ್ಲಾ ಪದಾಧಿಕಾರಿಗಳು ಭಾಗವಹಿಸುವುದರ ಮೂಲಕ ಕಾರ್ಯಕ್ರಮವನ್ನು ಯಶಸ್ವಿ ಮಾಡಿದರು.
ವರದಿ : ರಾಜು




