ಸಿಂಧನೂರು : –ತುರವಿಹಾಳ ಪಟ್ಟಣದಲ್ಲಿ ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಇಂದು ಬೆಳಗ್ಗೆ 9:30ಕ್ಕೆ ಶ್ರೀ ಸಿದ್ದರಾಮೇಶ್ವರ 854 ನೇ ಜಯಂತಿ ಆಚರಣೆ ಮಾಡಲಾಯಿತು ಎಂದು ಸಂಘದ ಅಧ್ಯಕ್ಷ ಅನ್ವರ್ ಪಾಷಾ ತಿಳಿಸಿದರು
ನಂತರ ಅವರು ಮಾತನಾಡಿ 12ನೇ ಶತಮಾನದ ಶಿವಶರಣ, ವಚನಕಾರ, ಕಾಯಕಯೋಗಿ ಸಿದ್ದರಾಮೇಶ್ವರರು ಕಾಯಕವೇ ಕೈಲಾಸ ಎಂದು ತೋರಿಸಿಕೊಟ್ಟರು. ಅವರ ವಚನಗಳು ಇಂದಿಗೂ ನಮ್ಮನ್ನು ಪ್ರೇರೇಪಿಸುತ್ತವೆ ಎಂದರು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ : ವೆಂಕಟೇಶ್ ಮಾಕಾಪುರ.ಹೊನ್ನೂರಪ್ಪ ಕುಂಬಾರ್,ಮುನಿಸ್ವಾಮಿ.ದ್ಯಾಮಣ್ಣ ಗುಂಡ.ಮುದುಕಪ್ಪ ಬೋವಿ.ನಾಗಲಿಂಗಪ್ಪ.ಚಂದ್ರಶೇಖರ್.ವೆಂಕೋಬ್ ಕುರ್ಕುಂದಿ.ಎಲ್ಲಪ್ಪ. ಹುಸೇನ್ ಸಾಬ್.ಪರಸಪ್ಪ. ಮುತ್ತಣ್ಣ ಬೋವಿ. ಹನುಮಂತ.ದೇವೇಂದ್ರಪ್ಪ. ಮರಿಯಪ್ಪ.ರಾಮ. ನಿಂಗಪ್ಪ.
ಇನ್ನು ಅನೇಕರು ಭಾಗವಹಿಸಿದ್ದರು.
ವರದಿ: – ಬಸವರಾಜ ಬುಕ್ಕನಹಟ್ಟಿ




