Ad imageAd image

ಲಕ್ಕುಂಡಿಯಲ್ಲಿ ಉತ್ಖನನ ವೇಳೆ ಮನೆಯೊಳಗೆ ಈಶ್ವರನ ದೇವಸ್ಥಾನ ಪತ್ತೆ

Bharath Vaibhav
ಲಕ್ಕುಂಡಿಯಲ್ಲಿ ಉತ್ಖನನ ವೇಳೆ ಮನೆಯೊಳಗೆ ಈಶ್ವರನ ದೇವಸ್ಥಾನ ಪತ್ತೆ
WhatsApp Group Join Now
Telegram Group Join Now

ಗದಗ : ಗದಗದ ಲಕ್ಕುಂಡಿಯಲ್ಲಿ ನಿಧಿ ಸಿಕ್ಕ ಬೆನ್ನಲ್ಲೆ, ರಾಜ್ಯ ಸರ್ಕಾರ ಉತ್ಖನನಕ್ಕೆ ಮುಂದಾಗಿದ್ದು, ಕಳೆದ ನಾಲ್ಕು ದಿನಗಳಿಂದ ಉತ್ಖನನ ಕಾರ್ಯ ನಡೆದಿದೆ.

ಈ ವೇಳೆ ಹಲವು ಪುರಾತನ ವಸ್ತುಗಳು ಪತ್ತೆಯಾಗಿವೆ. ಇದೀಗ ಲಕ್ಕುಂಡಿ ಗ್ರಾಮದಲ್ಲಿ ಉತ್ಖನನ ವೇಳೆ ಮನೆಯೊಂದರಲ್ಲಿ ಪುರಾತನ ಈಶ್ವರ ದೇವಸ್ಥಾನ ಪತ್ತೆಯಾಗಿದೆ.

ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಶಿವಯ್ಯ ಹಾಗೂ ಶೇಖರಯ್ಯ ಚೌಕಿಮಠ ಎಂಬವರ ಕುಟುಂಬ ದೇವಸ್ಥಾನದೊಳಗೆ ಮನೆ ನಿರ್ಮಾಣ ಮಾಡಿಕೊಂಡು ವಾಸಿಸುತ್ತಿದೆ. ಈ ಮನೆಯಲ್ಲಿ ಸುಮಾರು 5-6 ಮಂದಿ ವಾಸ ಮಾಡುತ್ತಿದ್ದಾರೆ.

ದೇವಸ್ಥಾನದ ಹೊರಭಾಗದಲ್ಲಿ ಮನೆಯಿದೆ.ಅದರೊಳಗೆ ಈ ಐತಿಹಾಸಿಕ ದೇವಾಲಯವಿದೆ. ಈ ದೇವಾಲಯದೊಳಗೆ ನಾಲ್ಕನೇ ಶತಮಾತನದ ಶಿವನ ಮೂರ್ತಿಯಿದೆ. ಈ ಮೂರ್ತಿಯನ್ನೇ ಕುಟುಂಬದವರು ಆರಾಧಿಸುತ್ತಾ ಬಂದಿದ್ದಾರೆ. ಸುಮಾರು 5 ತಲೆಮಾರಿನಿಂದ ಈ ಕುಟುಂಬ ಇಲ್ಲಿ ವಾಸಿಸುತ್ತಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!