ಬೆಂಗಳೂರು: ನಟ ಕಿಚ್ಚ ಸುದೀಪ್ ಹಾಗೂ ಚಂದ್ರಚೂಡ ವಿರುದ್ಧ ವಂಚನೆ ಆರೋಪವನ್ನು ಕಾಫಿ ತೋಟದ ಮಾಲೀಕರೊಬ್ಬರು ಮಾಡಿದ್ದಾರೆ. ಇದೇ ಕಾರಣಕ್ಕಾಗಿ ಇಬ್ಬರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ನಟ ಕಿಚ್ಚ ಸುದೀಪ್, ಚಂದ್ರಚೂಡ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ.ಕೇಸ್ ವಾಪಾಸ್ ಪಡೆದ ಮೇಲೆ ಬಾಕಿ ಹಣ ನೀಡದೇ ವಂಚಿಸಿದಂತ ಆರೋಪ ಮಾಡಲಾಗಿದೆ. ಕಾಫಿ ತೋಟದ ಮಾಲೀಕ ದೀಪಕ್ ರಿಂದ ಈ ಗಂಭೀರ ಆರೋಪ ಮಾಡಲಾಗಿದೆ.
ಬೆಂಗಳೂರಿನ ಕಮೀಷನರ್ ಕಚೇರಿಗೆ ತೆರಳಿದಂತ ಕಾಫಿ ತೋಟದ ಮಾಲೀಕ ದೀಪಕ್ ಎಂಬುವರು ನಟ ಕಿಚ್ಚ ಸುದೀಪ್ ಹಾಗೂ ಚಂದ್ರಚೂಡ ವಿರುದ್ಧ ದೂರು ನೀಡಿದ್ದಾರೆ. ಜನವರಿ.16ರಂದು ದೀಪಕ್ ಮಯೂರ್ ಎಂಬುವರು ದೂರು ನೀಡಿದ್ದಾರೆ.
ವಾರಸ್ಥಾರ ಧಾರವಾಹಿಗಾಗಿ 2 ವರ್ಷಗಳ ಅಗ್ರಿಮೆಂಟ್ ಆಗಿತ್ತು. ಚಿತ್ರೀಕರಣಕ್ಕಾಗಿ ಕಾಫಿ ತೋಟ, ಮರಗಳ ನಾಶ ಆರೋಪ ಮಾಡಲಾಗಿದೆ. 95 ಲಕ್ಷ ಪರಿಹಾರ ನೀಡುವಂತೆ ಕೇಸ್ ಅನ್ನು ದೀಪಕ್ ಹಾಕಿದ್ದರು.
60 ಲಕ್ಷ ನೀಡುವುದಾಗಿ ಭರವಸೆಯನ್ನು ನಟ ಕಿಚ್ಚ ಸುದೀಪ್ ನೀಡಿದ್ದರು. ಆದರೇ ಅದನ್ನು ಕೊಡದೇ ವಂಚನೆ ಮಾಡುತ್ತಿರೋದಾಗಿ ಈಗ ದೀಪಕ್ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.




