Ad imageAd image

ಆಲಮಟ್ಟಿ: ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘ ಧರಣಿ.

Bharath Vaibhav
ಆಲಮಟ್ಟಿ: ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘ ಧರಣಿ.
WhatsApp Group Join Now
Telegram Group Join Now

ನಿಡಗುಂದಿ:-ಆಲಮಟ್ಟಿ ಅರಣ್ಯ ವಿಭಾಗದ ಡ್ಯಾಮ್ ಸುತ್ತಮುತ್ತಲಿರುವ ಉದ್ಯಾನವನ ನಿರ್ಮಾಣವನ್ನು ಹೊರಗುತ್ತಿಗೆ ನೀಡಿರುವ ಟೆಂಡರ್ ಅನ್ನು ರದ್ದು ಪಡಿಸಬೇಕು ಒತ್ತಾಯಿಸಿ ಧರಣಿಗಳಿದ ಕೂಲಿಕಾರ್ಮಿಕರು.”
ಆಲಮಟ್ಟಿಯಲ್ಲಿ ಉದ್ಯಾನವನದ ಸುತ್ತಮುತ್ತಲು ಸ್ವಚ್ಛತೆ ಹಾಗೂ ಪ್ರವಾಸಿಗರನ್ನು ಆಕರ್ಷಿಸುವಂತೆ ಕಲ್ಲು, ಗುಂಡು, ತಗ್ಗು, ಕಂಟಿಗಳಿಂದ ಕೂಡಿದ ಪ್ರದೇಶವನ್ನು ಹಗಲು ರಾತ್ರಿಯನ್ನದೇ ಸ್ವಚ್ಛಗೊಳಿಸುತ್ತೇವೆ.ಗಿಡ ಮರಗಳನ್ನು ಹಾಗೂ ಹೂ ಬಳ್ಳಿಗಳನ್ನು ನೆಟ್ಟು ಸಾವಿರಾರು ಪ್ರವಾಸಿಗರು ವೀಕ್ಷಿಸುವ ಮನರಂಜನೆಯ ತಾಣವನ್ನಾಗಿ ಮಾಡಿದ್ದು ನಮಗೆ ಹೆಮ್ಮೆ ಇದೆ.

ನಾವು ಸುಮಾರು 25 ವರ್ಷಗಳಿಂದ ಹಗಲಿರುಳು ಎನ್ನದೆ ನಮ್ಮ ಕುಟುಂಬವನ್ನು ಪಣಕ್ಕಿಟ್ಟು ನಾವು ಇಲ್ಲಿ ದುಡಿದಿದ್ದೇವೆ.
ಹೊರಗುತ್ತಿಗೆ ಟೆಂಡರ್ ಕೂಡಲೇ ಕೈಬಿಡಬೇಕು, ಕಳೆದ ಮೂರು ತಿಂಗಳಿಂದ ನಮಗೆ ಸಿಗುವ ವೇತನ ಸಿಕ್ಕಿರುವುದಿಲ್ಲ ನಮ್ಮ ವೇತನವನ್ನು ಸಮಯಕ್ಕೆ ಸರಿಯಾಗಿ ಸಿಗುವಂತೆ ಒತ್ತಾಯಿಸಿದರು.ತಿಂಗಳ ವೇತನವನ್ನೇ ನಂಬಿಕೊಂಡು ನಮ್ಮ ಕುಟುಂಬಗಳು ಸಾಲಗಳನ್ನು ಮಾಡಿ ಕುಟುಂಬವನ್ನು ನಡೆಸುವುದು ಬಹಳ ಕಷ್ಟವಾಗಿದೆ, ಎಂದು ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘದ ಅಧ್ಯಕ್ಷರಾದ ವಿರುಪಾಕ್ಷಿ ಮಾದರ ಹೇಳಿದರು.“ ಧರಣಿಯ ಸತ್ಯಾಗ್ರಹವನ್ನು ನೋಡಿದ ಅಧಿಕಾರಿಗಳು ಕೂಡಲೇ ಅವರ ಮನವಿಯನ್ನು ಸ್ವೀಕರಿಸಿ ಎರಡು ಮೂರು ದಿನದೊಳಗೆ ನಿಮ್ಮ ವೇತನವನ್ನು ಕೊಡಲಾಗುವುದು ಎಂದು ಮುಖ್ಯ ಅಭಿಯಂತರ ಅಧಿಕಾರಿ ಡಿ ಬಸವರಾಜ, ಹೇಳಿದರು.”

“ಎನ್ .ಕೆ.ಬಾಗಾಯತ್ ಉಪ ಅರಣ್ಯ ಸಂರಕ್ಷಣಾಧಿಕಾರಿ ಮನವಿಯನ್ನು ಸ್ವೀಕರಿಸಿ ನಿಮ್ಮ ಬೇಡಿಕೆಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಅನುಕೂಲವಾಗುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದರು. “ಈ ಸಂದರ್ಭದಲ್ಲಿ ಅವಣ್ಣ ವಾಲಿಕಾರ್ಕಾ, ಕಾಶಿನಾಥ್ ಬಿಂಗೆ, ಶಂಕರ ಪಡಸಲಗಿ, ಮಹೇಶ್ ತೆಲಗಿ, ಚೆನ್ನಪ್ಪ ಹುಲ್ಲೂರು, ಅಲ್ಲಾಸಾಬ್, ಬಸಪ್ಪ ತುಂಬರಮಟ್ಟಿ, ನೀಲವ್ವ, ರುಕ್ಮ ಚವಾಣ್, ರೇಣುಕಾ ಚಲವಾದಿ, ಶೋಭಾ ಗೌಡರ್ ಇನ್ನು ಅನೇಕ ದಿನಗೂಲಿ ನೌಕರಸ್ಥರು ಹಾಜರಿದ್ದರು.

ವರದಿ: ಅಲಿ ಮಕಾನದಾರ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!