Ad imageAd image

ಚುನಾವಣೆ ನಂತರ ದ್ವೇಷ ರಾಜಕಾರಣ ಮಾಡಬಾರದು: ಶಾಸಕ ರಮೇಶ ಜಾರಕಿಹೋಳಿ

Bharath Vaibhav
ಚುನಾವಣೆ ನಂತರ ದ್ವೇಷ ರಾಜಕಾರಣ ಮಾಡಬಾರದು: ಶಾಸಕ ರಮೇಶ ಜಾರಕಿಹೋಳಿ
WhatsApp Group Join Now
Telegram Group Join Now

ಗೋಕಾಕ :-ವಿದ್ಯಾವಂತರಿಂದ ದೇಶದ ಭವಿಷ್ಯ ಉಜ್ವಲವಾಗುತ್ತದೆ ಅದರ ಜೊತೆಗೆ ದೇಶಕ್ಕೆ ಬರುವ ಗಂಡಾಂತರಗಳನ್ನು ದೂರ ಮಾಡುತ್ತಾರೆ ಅದಕ್ಕಾಗಿ ಮಕ್ಕಳಿಗೆ ಶಿಕ್ಷಕರು ಉತ್ತಮ ಶಿಕ್ಷಣ ನೀಡಬೇಕೆಂದು ಗೋಕಾಕ ಶಾಸಕ ರಮೇಶ ಜಾರಕಿಹೋಳಿಯವರು ತಿಳಿಸಿದರು.ಗೋಕಾಕ ತಾಲೂಕಿನ ಚಿಕ್ಕನಂದಿ ಗ್ರಾಮದಲ್ಲಿ ಸರಕಾರಿ ಉನ್ನತಿಕರಿಸಿದ ಪ್ರೌಢಶಾಲೆ ಹಾಗೂ ಆಂಗ್ಕ ಮಾದ್ಯಮ ಶಾಲೆ ಮತ್ತು ಪೂರ್ವ ಪ್ರಾಥಮಿಕ ಶಾಲೆ ಮತ್ತು ಎಪ್,ಎಲ್,ಎನ್, ಕಲಿಕಾ ಹಬ್ಬವನ್ನು ಜ್ಯೋತಿ ಬೆಳಿಗಿಸಿ ಉದ್ಘಾಟಿಸಿ ಮಾತನಾಡಿದರು.

ಚುನಾವಣೆ ಗೆದ್ದ ನಂತರ ದ್ವೇಷ ರಾಜಕೀಯ ಮಾಡಬಾರದು ನಾನು ನಮ್ಮಲ್ಲಿರುವ ಜನರಿಗೆ ಸೊತವರಿಗೊಂದಿಗೆ ಗೆಳೆತನ ಬೆಳಿಸಿ ಒಳ್ಳೆತನ ಬೆರೆಸಲು ತಿಳಿಸಿದ್ದೇನೆ,ನಿಮ್ಮ ಗ್ರಾಮದಲ್ಲಿನ ಕಾಮಗಾರಿಗೆ ಪೂಜೆ ಮಾಡಬೇಕು.
ನನ್ನನ್ನು ಗೆಲ್ಲಿಸಿದವರು ನೀವು,ನೀವೆ ನಿಮ್ಮ ಗ್ರಾಮದಲ್ಲಿನ ಕಾಮಗಾರಿಗಳಿಗೆ ಪೂಜೆ ಮಾಡಬೇಕು.ಯಾಕೆಂದರೆ ನನ್ನನ್ನು ಗೆಲ್ಲಿಸಿದವರು ನೀವು ಕೂಡ ಶಾಸಕರಿದ್ದಂತೆ ಅದಕ್ಕಾಗಿ ,ನಾನು ಪೂಜೆಗಳಿಗೆ ಬರುವುದಿಲ್ಲ ಎಂದು ಶಾಸಕರು ಪೂಜೆಗೆ ಬರುವುದಿಲ್ಲ ಅನ್ನುವವರಿಗೆ ತೀರುಗೇಟು ನೀಡಿದರು.

ಇದೆ ಸಂದರ್ಭದಲ್ಲಿ ಶಾಸಕ ರಮೇಶ ಜಾರಕಿಹೋಳಿ ಯವರು ಉಪ್ಪಾರಟ್ಟಿ ಮಾಲದಿನ್ನಿ ಮತ್ತು ಮಮದಾಪುರ ಗ್ರಾಮದಲ್ಲಿ ವಿವಿದ ಕಾಮಗಾರಿಗಳಿಗೆ ಭೂಮಿ‌ಪೂಜೆ ನೇರವೆರಿಸಿದರ, ನಂತರ ಸ್ಥಳಿಯ ಮುಖಂಡರಗಳಿಂದ ಸತ್ಕಾರ ಸ್ವಿಕರಿಸಿ ಸರಕಾರಿ ಶಾಲೆಗೆ ಭೂ ದಾನ ಮಾಡಿದ ಮಹನಿಯರಿಗೆ ಶಾಲು ಹೊದಿಸಿ ಸತ್ಕರಿಸಿದರು.ಈ ಸಂದರ್ಭದಲ್ಲಿ ಇಂಚಲ ಮಠದ ಶ್ರೀಗಳು,ಗೋಕಾಕ ತಹಸಿಲ್ದಾರ ಡಾ: ಮೊಹನ ಬಸ್ಮೆ, ಶಾಮಾನಂದ ಪೂಜೇರಿ ಚಿಕನಂದಿ ಗ್ರಾಮದ ಸರಕಾರಿ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕಿಯರು, ಮುಖಂಡರಾದ ಡಾ: ಹನಮಂತ ಯಡ್ರಾಂವಿ ಸೇರಿದಂತೆ ಇನ್ನೂಳಿದವರು ಉಪಸ್ಥಿತರಿದ್ದರು.

ವರದಿ: – ಮನೋಹರ ಮೇಗೇರಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!