ಸೇಡಂ : ತಾಲೂಕು ಕ್ರೀಡಾಂಗಣದ ಪಕ್ಕ ಇರುವ ಒಳಾಂಗಣ ಕ್ರೀಡಾಂಗಣ (ಬ್ಯಾಡ್ಮಿಂಟನ್ ಕೋಟ್) ಉದ್ಘಾಟನೆಗೆ ಸ್ವತಃ ವೈದ್ಯಕೀಯ ಶಿಕ್ಷಣ & ಕೌಶಲ್ಯಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ ಬ್ಯಾಡ್ಮಿಂಟನ್ ಆಡುವ ಮೂಲಕ ಚಾಲನೆ ನೀಡಿದರು.
1.80 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾದ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣವನ್ನು ಮಂಗಳವಾರ ಸೇಡಂನಲ್ಲಿ ಸಚಿವ ಡಾ.ಶರಣಪ್ರಕಾಶ ಪಾಟೀಲ ರಿಬ್ಬಿನ್ ಕತ್ತರಿಸಿ, ಬ್ಯಾಡ್ಮಿಂಟನ್ ಆಡುವ ಮುಖಾಂತರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸೇಡಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿಶ್ವನಾಥ ಪಾಟೀಲ ಬೊಮ್ಮನಹಳ್ಳಿ, ನಾಗೇಶರಾವ್ ಮಾಲಿಪಾಟೀಲ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಹಾಗೂ ತಾಲೂಕಾಡಳಿತ ಅಧಿಕಾರಿಗಳು ಹಾಗೂ ಬ್ಯಾಡ್ಮಿಂಟನ್ ಆಟಗಾರರು ಉಪಸ್ಥಿತರಿದ್ದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.




