ಬೆಂಗಳೂರು : ಸನಾತನ ಹಿಂದೂ ಧರ್ಮ ನಾವು ರಕ್ಷಿಸಿದರೆ ಧರ್ಮ ನಮ್ಮನ್ನೂ ರಕ್ಷಿಸುತ್ತದೆ ಎಂದು ಅಘೋರಿ ಅಖಾರ ಆಚಾರ್ಯ ಅಘೋರಿ ಗುರು ಡಾ. ಮಣಿಕಂದನ್ ಮಹಾರಾಜ ಹೇಳಿದರು.
ಅವರು ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಆರ್ ಎಂ ಸಿ ಯಾರ್ಡ್ 9ನೇ ಗೇಟ್ ಬಳಿ ಇರುವ ಪ್ರಸಿದ್ಧ ದೇವಸ್ಥಾನದಲ್ಲಿ ಒಂದಾದ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ಚಂದ್ರಶೇಖರ್ ಅವರು ಪೂಜಾ ಪುನಸ್ಕಾರ ಮಹಾಮಂಗಳಾರತಿ ಮತ್ತು ಪ್ರತಿ ವಾರ ಮಂಗಳವಾರ ದಂದು ಸಾವಿರಾರು ಜನ ಸಾರ್ವಜನಿಕರಿಗೆ ಅನ್ನ ದಾಸೋಹ ಕಾರ್ಯ ಕ್ರಮವನ್ನು ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ಅಧ್ಯಕ್ಷ ಸೇಲ್ವ್ ರಾಜು ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.
ಅಂತಾರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ರಾಜ್ಯಾಧ್ಯಕ್ಷ ವಿ ಆನಂದ್, ಹಿರಿಯ ಮುಖಂಡ ಮುನಿರಾಜು ಅವರ ಸಮ್ಮುಖದಲ್ಲಿ ಅಘೋರಿ ಅಖಾರ ಆಚಾರ್ಯ ಅಘೋರಿ ಗುರು ಡಾ. ಮಣಿಕಂದನ್ ಮಹಾರಾಜ ಅವರು ಅನ್ನ ದಾನಕ್ಕೆ ಚಾಲನೆ ನೀಡಿ ಅವರು ಒಂದು ಶಾಶ್ವತ ಜೀವನ ಆತ್ಮದ ಅಮರತ್ವ, ಕರ್ಮ, ಪುನರ್ಜನ್ಮ, ಧರ್ಮ (ಕರ್ತವ್ಯ), ಮೋಕ್ಷದ ಗುರಿ,ವಿಶ್ವ ಶಾಂತಿ ನೀಡುತ್ತದೆ ಎಲ್ಲಾ ಜೀವಿಗಳಲ್ಲಿ ದೈವತ್ವವನ್ನು ವೈವಿಧ್ಯತೆಯಲ್ಲಿ ಏಕತೆಯನ್ನು ಪೋಷಿಸುತ್ತದೆ ಮತ್ತು ಯೋಗ, ಧ್ಯಾನದ ಮೂಲಕ ಆತ್ಮಸಾಕ್ಷಿಯಾಗಿದೆ ಅಘೋರಿ ಅಖಾರ ಆಚಾರ್ಯ ಅಘೋರಿ ಗುರು ಡಾ. ಮಣಿಕಂದನ್ ಮಹಾರಾಜ ಭಕ್ತರನ್ನು ಉದ್ದೇಶಿಸಿ ಆಶೀರ್ವಚನ ನೀಡಿದರು.
ಅಂತಾರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ರಾಜ್ಯಾಧ್ಯಕ್ಷ ವಿ ಆನಂದ್ ಮಾತನಾಡಿ ಈ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಅತಿ ಶೀಘ್ರದಲ್ಲಿ ಬಾಲರಾಮನ ವಿಗ್ರಹವನ್ನು ಸ್ಥಾಪಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಅಘೋರಿ ಪ್ರಮೀಳಾ, ನವಿನ್,ಕೃಷ್ಣಮೂರ್ತಿ, ವಿಶ್ವ, ಆದಿ ನಾರಾಯಣ, ರವಿ, ಕುಮಾರ್, ಶಿವಣ್ಣ, ಲಲೀತ್ ಬಾಯಿ, ಪ್ರಕಾಶ್, ರಾಜು,ಡಾ .ಚೌದ್ರಿ ನಾಯ್ಡು, ಸೇರಿದಂತೆ ಮುಂತಾದವರು ಇದ್ದರು.
ವರದಿ : ಅಯ್ಯಣ್ಣ ಮಾಸ್ಟರ್




