ಚಿಟಗುಪ್ಪ : ಜ.26 ರಂದು ಗಣರಾಜ್ಯೋತ್ಸವ ಕಾರ್ಯಕ್ರಮ ಅರ್ಥಪೂರ್ಣವಾಗಿ ಆಚರಿಸಲು ಎಲ್ಲಾ ಅಧಿಕಾರಿಗಳು ಕೈಜೋಡಿಸಿಬೇಕು ಎಂದು ತಹಸೀಲ್ದಾರ್ ಮಂಜುನಾಥ್ ಪಂಚಾಳ ತಿಳಿಸಿದರು.
ಪಟ್ಟಣದ ಪುರಸಭೆ ಕಚೇರಿಯಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ತಹಸೀಲ್ದಾರ್, ತಾಲ್ಲೂಕು ಆಡಳಿತದಿಂದ ಆಚರಿಸುವ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರತಿಯೊಂದು ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು.
ಕಾರ್ಯಕ್ರಕ್ಕೆ ಗೈರಾಗುವ ಅಧಿಕಾರಿಗಳಿಗೆ ಮುಲಾಜ್ ಇಲ್ಲದೆ ಅವರಿಗೆ ನೋಟಿಸ್ ಜಾರಿ ಮಾಡಿ ಕ್ರಮ ವಹಿಸಲಾಗುತ್ತದೆ.
ಚಿಟಗುಪ್ಪ ಪಟ್ಟಣದಲ್ಲಿ ಇರುವ ಸರ್ಕಾರಿ ಕಚೇರಿಗಳು ಸೇರಿ ಪ್ರಮುಖ ವೃತ್ತಗಳನ್ನು ಶುಚಿಗೊಳಿಸಿ,ವಿದ್ಯುತ್ ದಿಪಗಳಿಂದ ಅಲಂಕರಿಸಬೇಕು ಎಂದು ಪುರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ವೈದ್ಯಧಿಕಾರಿ ವಿಜಯ ಹಿರಸ್ಕಾರ,ಎಎಸ್ಐ ಭೀಮರಾವ ರಾಠೋಡ್, ಅರಣ್ಯ ಅಧಿಕಾರಿ ವೀರಯ್ಯ ಸ್ವಾಮಿ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು.
ವರದಿ : ಸಜೀಶ್ ಲಂಬುನೋರ್




