ಧಾರವಾಡ : ರಾಜ್ಯದಲ್ಲಿ ಬೆಚ್ಚಿ ಬೀಳಿಸೋ ಕೃತ್ಯವೊಂದು ನಡೆದಿದ್ದು, ಯುವತಿಯನ್ನು ಕೊಂದು ಮೃತದೇಹವನ್ನು ಪೀಸ್ ಮಾಡಿ ಎಸೆದ ಘಟನೆ ಧಾರವಾಡದ ಜನರನ್ನು ಬೆಚ್ಚಿ ಬೀಳಿಸಿದೆ.
ಧಾರವಾಡದ ಹೊರವಲಯದಲ್ಲಿ ಈ ಕೊಲೆ ನಡೆದಿದೆ. ಮೃತಳನ್ನು 19 ವರ್ಷದ ಝಕಿಯಾ ಮುಲ್ಲಾ ಎಂದು ಗುರುತಿಸಲಾಗಿದೆ.
ಝಕಿಯಾ ಎಂಬ ಮುಸ್ಲಿಂ ಯುವತಿಯ ಕೊಲೆಯಾಗಿದ್ದು, ಈಕೆ ಧಾರವಾಡದ ಗಾಂಧಿ ಚೌಕ್ ಬಡಾವಣೆಯ ನಿವಾಸಿ ಎಂದು ಗುರುತಿಸಲಾಗಿದೆ. ಹಂತಕರು ಯುವತಿಯನ್ನು ಶವ ಪೀಸ್ ಪೀಸ್ ಮಾಡಿ ಬಿಸಾಡಿದ್ದಾರೆ ಎನ್ನಲಾಗಿದೆ.
ಧಾರವಾಡದಲ್ಲಿ ನಡೆದ ಯುವತಿಯ ಕೊಲೆ ಆತಂಕಕ್ಕೆ ಕಾರಣವಾಗಿದೆ. ಯುವತಿಯ ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




