ಬೆಂಗಳೂರು : ನಾಡಿನ ಪ್ರತಿಯೊಬ್ಬ ಮಹಿಳೆಯೂ ಕೂಡ ಆರ್ಥಿಕ ಸಂಕಷ್ಟಗಳಿಂದ ಹೊರಬಂದು ಸುಖ ಸಂತೋಷದಿಂದ ಜೀವನ ಸಾಗಿಸುವಂತಾಗಬೇಕು ಎಂಬ ರಾಜ್ಯ ಸರ್ಕಾರದ ಉದ್ದೇಶವನ್ನು ಗೃಹಲಕ್ಷ್ಮಿ ಯೋಜನೆಯು ಈಡೇರಿಸುತ್ತಿದೆ.
ಮಂಗಳೂರಿನ ಕಲ್ಲಾಪು ಪಟ್ಲದ ಝೀನತ್ ಎಂಬ ಮಹಿಳೆ ಉಪ್ಪಿನಕಾಯಿ ಮಾರಾಟದ ಮೂಲಕ ತನ್ನ ಜೀವನ ಸಾಗಿಸುತ್ತಿದ್ದಾರೆ.ಆ ಪ್ರಯಾಣದಲ್ಲಿ ಅವರಿಗೆ ನೆರವಾದದ್ದು ಗೃಹಲಕ್ಷ್ಮಿ ಯೋಜನೆ ಮತ್ತು ಅದರಿಂದ ಖರೀದಿಸಿದ ಒಂದು ಸ್ಕೂಟರ್.
ಸ್ಕೂಟರ್ ಬಂದ ನಂತರ ಝೀನತ್ ಅವರು ಮನೆ ಮನೆಗೆ ತೆರಳಿ ಉಪ್ಪಿನಕಾಯಿ ಮಾರಾಟ ಮಾಡುತ್ತಿದ್ದಾರೆ. ಗ್ರಾಹಕರ ಸಂಖ್ಯೆ ಹೆಚ್ಚಳವಾಗಿದೆ. ಉತ್ತಮ ಆದಾಯ ಗಳಿಸಿ ಸ್ವಾವಲಂಬಿಯಾಗಿ ಬದುಕುತ್ತಿದ್ದಾರೆ.
ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಕೇವಲ ಹಸಿವನ್ನು ನೀಗಿಸುವುದಲ್ಲದೆ ಜನರ ಅವಶ್ಯಕತೆಗಳನ್ನೂ ಪೂರೈಸುವ ಮೂಲಕ ಬಡವರ ಬದುಕಿಗೆ ಆಸರೆಯಾಗಿವೆ.




