ದಕ್ಷಿಣ ಕನ್ನಡ : ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಎರಡು ತಿಂಗಳಲ್ಲಿ 14.77 ಕೋಟಿ ರೂ. ಆದಾಯ ಬಂದಿದೆ.
2025ರ ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ವಿವಿಧ ಸೇವೆ, ಹುಂಡಿ, ಅನ್ನದಾನ ನಿಧಿಯಿಂದ 14.77 ಕೋಟಿ ರೂಪಾಯಿ ಆದಾಯ ಬಂದಿದೆ.
ನವೆಂಬರ್ ನಲ್ಲಿ ಹುಂಡಿಯಿಂದ 1.09 ಕೋಟಿ ರೂ., ವಿವಿಧ ಸೇವೆಗಳಿಂದ 4.56 ಕೋಟಿ ರೂ., ಅನ್ನದಾನ ನಿಧಿಯಿಂದ 83.57 ಲಕ್ಷ ರೂ.ಆದಾಯ ಬಂದಿದೆ.
ಡಿಸೆಂಬರ್ ನಲ್ಲಿ ವಿವಿಧ ಸೇವೆಗಳಿಂದ 5.30 ಕೋಟಿ ರೂ., ಹುಂಡಿಯಿಂದ 1.9 ಕೋಟಿ ರೂ., ಅನ್ನದಾನ ನಿಧಿಯಿಂದ 1.07 ಕೋಟಿ ರೂ. ಆದಾಯ ಬಂದಿದೆ. ವಸತಿ ಗೃಹ, ಇತರೆ ಮೂಲಗಳಿಂದ ಕೂಡ ಆದಾಯ ಬಂದಿದೆ. ಒಟ್ಟಾರೆ ಎರಡು ತಿಂಗಳಲ್ಲಿ 14.77 ಕೋಟಿ ರೂ. ಆದಾಯ ಬಂದಿದೆ ಎಂದು ಹೇಳಲಾಗಿದೆ.




