ಬೆಂಗಳೂರು : ಕರ್ನಾಟಕದ ಧಾರ್ಮಿಕ ಸಾಮಾಜಿಕ ಮತ್ತು ಶೈಕ್ಷಣಿಕ ಇತಿಹಾಸದಲ್ಲಿ ದಾಸೋಹ ಎಂಬ ಪದಕ್ಕೆ ಜೀವಂತ ಅರ್ಥ ನೀಡಿದ ಮಹಾನ್ ಯೋಗಿ ಎಂದರೆ ಡಾ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಎಂದು ಚಿಂತಕರು, ವಾಗ್ಮಿಗಳು,ಬುದ್ದಿಜೀವಿಗಳು ಮತ್ತು ರಾಜಗೋಪಾಲನಗರದ ಸಮಾಜ ಸೇವಕ ಡಾ. ಸಂಗನ ಬಸಪ್ಪ ಬಿರಾದಾರ್ ಹೇಳಿದರು.
ಅವರು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಚಿಕ್ಕಬಾಣವಾರ ವಿಶ್ವ ವೀರಶೈವ ಲಿಂಗಾಯತ ಮತ್ತು ಶ್ರೀ ವೀರ ವೀರ ಶೈವ ಲಿಂಗಾಯತ ವೇದಿಕೆಯ ಕಚೇರಿಯಲ್ಲಿ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಎಂ ಎಚ್ ಪಾಟೀಲ್ ಅವರ ನೇತೃತ್ವದಲ್ಲಿ ಡಾ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಪುಣ್ಯ ಸ್ಮರಣೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ದಾಸೋಹಕೆ ಚಾಲನೆ ನೀಡಿ ನಂತರ ಅವರು ಡಾ ಶ್ರೀ ಶಿವಕುಮಾರ ಮಹಾನ್ ಶಿವಯೋಗಿಗಳು ಕಲ್ಪತರು ನಾಡಿನ ದೈವವೆಂದು ಕರೆಯಲ್ಪಡುತ್ತದೆ ಎಂದು ಡಾ. ಬಿರಾದಾರ್ ಮಾತನಾಡಿದರು.

ಇದೆ ವೇಳೆ ದೇಶ ಸೇವೆ ಈಶ ಸೇವೆ ಎಂಬಂತೆ ದೇಶ ರಕ್ಷಣೆ ಸೇವೆ ಅತ್ಯುನ್ನತ ಹುದ್ದೆ ಅಲಂಕರಿಸಿ ಈಗ ಅಡ್ವೈಸರ್ ಆಗಿ ವಿವಿಧ ರಾಷ್ಟ್ರಗಳಲ್ಲಿ ಸೇವೆ ಸಲ್ಲಿಸಿ ಈ ತುಮಕೂರಿನ ಶ್ರೀ ಸಿದ್ದಗಂಗಾ ಮಠದಲ್ಲಿ ವಿದ್ಯಾಭ್ಯಾಸ ಮಾಡಿ ಧಾರ್ಮಿಕ ಸಮಾಜ ಸೇವೆಗಳಲ್ಲಿ ಭಾಗಿಯಾಗಿರುವ ಮಲ್ಲಿಕಾರ್ಜುನ್ ರವರಿಗೆ ಎಲ್ಲರ ಸಮ್ಮುಖದಲ್ಲಿ ಶಾಲು ಹೊದಿಸಿ ಮೈಸೂರು ಪೆಟಾ ಧರಿಸಿ ಫಲಪುಷ್ಪದೊಂದಿಗೆ ಗೌರವಿಸಿ ಸನ್ಮಾನ ಸಲ್ಲಿಸಲಾಯಿತು.
ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಎಂ ಎಚ್ ಪಾಟೀಲ್ ಸರ್ವರಿಗೂ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಜನ ವಿಕಾಸ ಕೋ ಆಪರೇಟಿವ್ ಸೊಸೈಟಿ ಸಂಸ್ಥಾಪಕ ಅಧ್ಯಕ್ಷ ದಯಾನಂದ್, ಶಂಕರ್ ಗೌಡ ಪಾಟೀಲ್, ಸಿ ಎಸ್ ಆರಾಧ್ಯ, ಶರಣು ಆಲೂರ್,ಭಾಮಾ ರಾಜೇಂದ್ರ ಕುನ್ನೂರ್, ಗಂಗಾಧರ್ ಮೇಟಿ, ವಿರೂಪಾಕ್ಷ ಹಟ್ಟಿ, ವಕೀಲ ಚಿದಾನಂದ, ಕಿರಣ್ ಕುಮಾರ್, ಶಿವಕುಮಾರ್ ಮೇಟಿ, ಅಶೋಕ್ ಪಾಟೀಲ್ ಬಿರಾದರ್, ಪರಮೇಶ್ ಆರಾಧ್ಯ, ವೀರಭದ್ರಪ್ಪ, ಕಾಂತರಾಜ್, ಪುಷ್ಪ ರಾಜ್ ಸೇರಿದಂತೆ ಮುಂತಾದವರು ಪೂಜ್ಯ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ವರದಿ: ಅಯ್ಯಣ್ಣ ಮಾಸ್ಟರ್




