ಅಥಣಿ:: ಉಪನ್ಯಾಸಕರೊಬ್ಬರು ತಮ್ಮ ಮಗಳನ್ನು ಮದುವೆ ಮಾಡಿಕೊಳ್ಳುವ ಆಸೆ ತೋರಿಸಿ ಅಪಹರಣ ಮಾಡಿಕೊಂಡು ಪರಾರಿಯಾಗಿದ್ದಾರೆಂದು ಕಾಲೇಜು ವಿದ್ಯರ‍್ಥಿನಿ ತಂದೆ ದೂರು ದಾಖಲಿಸಿದ್ದಾರೆ.
ಇಲ್ಲಿನ ಪ್ಯಾರಾ ಮೆಡಿಕಲ್ ಕಾಲೇಜ್ ಹಾಗೂ ಸಂಶೋಧನಾ ಕೇಂದ್ರವೊAದರ ಉಪನ್ಯಾಸಕ ತಮ್ಮ ಮಗಳನ್ನು ಅಪಹರಣ ಮಾಡಿದ್ದಾರೆ ಎಂದು ಅದೇ ಕಾಲೇಜಿನ ವಿದ್ಯರ‍್ಥಿನಿ ತಂದೆ ದೂರಿನಲ್ಲಿ ಆರೋಪಿಸಿದ್ದಾರೆ.
ಆನವರಿ ೮ ರಂದು ತಮ್ಮ ಮಗಳನ್ನು ಉಪನ್ಯಾಸಕ ಅಪಹರಿಸಿಕೊಂಡು ಹೋಗಿದ್ದಾರೆಂದು ದೂರಿನಲ್ಲಿ ದೂರಲಾಗಿದ್ದು, ಸಿಪಿಐ ಸಂತೋಷ ಹಳ್ಳೂರು ಹಾಗೂ ಪಿಎಸ್.ಐ ಗಿರಿಮಲ್ಲಪ್ಪ ಉಪ್ಪಾರ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ.
ಮದುವೆ ಆಮೀಷ ಒಡ್ಡಿ ಮಗಳ ಅಪಹರಣ: ತಂದೆಯಿAದ ದೂರು




