ರಾಯಬಾಗ : ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಅಲಖನೂರ ಗ್ರಾಮದಲ್ಲಿ ಶ್ರೀ ಕರಿಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಅಲಖನುರಿನ ಸರ್ಕಾರಿ ನೌಕರರ ಒಕ್ಕೂಟ ಹಾಗೂ ಸಮಸ್ತ ಗ್ರಾಮಸ್ಥರಿಂದ ಸತ್ಕಾರ ಸಮಾರಂಭ ನಡೆಯಿತು.
ಶ್ರೀ ಕರಿಸಿದ್ದೇಶ್ವರ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ ನಾಗಪ್ಪ ಸಿಂಗಾಡಿ ಕಂಠಿಕಾರ ಅವರು ಅಧ್ಯಕ್ಷತೆ ಸ್ಥಾನ ವಹಿಸಿಕೊಂಡಿದ್ದರು.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಗೌರವಾಧ್ಯಕ್ಷರು ಸತ್ಕಾರ ಮೂರ್ತಿಗಳು ಶ್ರೀ ಪರಮಪೂಜ್ಯ ಶ್ರೀಕಾಂತ್ ಗುರೂಜಿ.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷರು ಶ್ರೀ ಚುನ್ನಪ್ಪ ಪೂಜಾರಿ.
ಅಲಖನುರಿನ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀ ಸಂಜು ಹೊರಟ್ಟಿ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷರು ಶ್ರೀ ಮಲ್ಲಪ್ಪ ಅಂಗಡಿ. ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾ ಕಾರ್ಯದರ್ಶಿ ಶ್ರೀ ಶ್ರೀಶೈಲ ಅಂಗಡಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಯಬಾಗ ತಾಲೂಕ ಅಧ್ಯಕ್ಷರು ಶ್ರೀ ರಮೇಶ್ ಕಲಾರ ಹಾಗೂ ಮಾಜಿ ಯೋಧರು ಈ ಸಮಾರಂಭ ದಲ್ಲಿ ಉಪಸ್ಥಿತರಿದ್ದರು.
ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷರು( ಶ್ರೀ ಚುನ್ನಪ್ಪ ಪೂಜಾರಿ ಅವರಿಗೆ.* ಕರ್ನಾಟಕ ರಾಜ್ಯ ರೈತ ಯೋದ ಪ್ರಶಸ್ತಿ**) ನೀಡಿ ಗೌರವಿಸಲಾಯಿತು.
ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಗೌರವಾಧ್ಯಕ್ಷರು ಶ್ರೀ ಪರಮಪೂಜ್ಯ (ಶ್ರೀ ಶಶಿಕಾಂತ ಗುರೂಜಿ ಅವರಿಗೆ ಕರ್ನಾಟಕ ರಾಜ್ಯ ರೈತ ಕ್ರಾಂತಿಯೋಗಿ ಪ್ರಶಸ್ತಿ) ನೀಡಿ ಗೌರವಿಸಲಾಯಿತು.
ಹಾಗೂ ಈ ಸಂದರ್ಭದಲ್ಲಿ ಸರ್ಕಾರಿ ನೌಕರರು ಚಿಕ್ಕ ಮಕ್ಕಳು ಮಹಿಳೆಯರು ಊರಿನ ಗ್ರಾಮಸ್ಥರು ಗುರುಹಿರಿಯರು ರೈತರು ಈ ಸಮಾರಂಭದಲ್ಲಿ ಭಾಗವಾಹಿಸಿದ್ದರು.
ವರದಿ : ಭರತ ಮುರಗುಂಡೆ




