ಐನಾಪುರ : ಕಾಗವಾಡ ತಾಲ್ಲೂಕಿನ ಐನಾಪುರ ಪಟ್ಟಣದ ದಿವಂಗತ ಅಣ್ಣಪ್ಪಾ ರಾಮಪ್ಪ ರಡ್ಡಿ ಇವರ ಪುಣ್ಯಸ್ಮರಣಾರ್ಥ ಅವರ ಚಿರಂಜೀವಿ ಎಸ್ ಡಿ ಎಂ ಸಿ ಅಧ್ಯಕ್ಷ ಸಂಜೀವ ಅಣ್ಣಪ್ಪಾ ರೆಡ್ಡಿಯವರು ಐನಾಪುರ ಸಿ ಆರ್ ಸಿ ಮಟ್ಟದ ಎಲ್ಲ ದೈಹಿಕ ಶಿಕ್ಷಕರಿಗೆ ಸ್ಥಳೀಯ ಶಾಂತಿ ಸಾಗರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ( ಕ್ರೀಡಾ ಜಾಕೇಟ) ವಿತರಿಸಿ ಅವರು ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಪ್ರಾಥಿಸಿದರು.

ಇ ಸಂದರ್ಭದಲ್ಲಿ ಶಾಂತಿಸಾಗರ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ಅರುಣ ಗಾಣಿಗೇರ, ಉಪಾಧ್ಯಕ್ಷ ಪಾಯಪ್ಪ ಕುಡವಕ್ಕಲಗಿ , ಸಂದೀಪ ರಡ್ಡಿ, ಮಂಜುನಾಥ ರಡ್ಡಿ ಆರ್ ಎಸ್ ಭಜಂತ್ರಿಆರ್ ಎ ಗಾಣಿಗೇರ, ಎಸ್ ಆರ್ ಕಟಗೇರಿ, ಡಿ ಆರ್ ಕಟ್ಟಿಮನಿ,ಜಿ .ಎಸ್ ಕುಡವಕ್ಕಲಗಿ ಆರ್ ಸಿ ಯಳ್ಳೂರ, ಆರ್ ಎ ಪತಂಗಿ ,ಶಿಮಾ ದಳವಾಯಿ ಎಸ್ .ಎಮ್ ಕಾಂಬಳೆ, ಎಲ್ ಬಿ ಪಾಟೀಲ, ಸುಧಾರಣಿ ವಾಘಮೋಡೆ,ಆದಿನಾಥ ಉಗಾರ,ಸರಸ್ವತಿ ದಾನೋಳಿ,ಸಂಗಮೇಶ ಚೌಗಲಾ ಬಾಹುಬಲಿ ಪಾಟೀಲ, ತಮ್ಮಣ್ಣಾ ಕಮತೆ, ಶಾಲಾ ಆಡಳಿತ ಮಂಡಳಿ ಸದಸ್ಯರು, ವಿದ್ಯಾರ್ಥಿಗಳು ಇತರರು ಇದ್ದರು.

ಮುಖೋಪದ್ಯಾಯ ಬಾಬುರಾವ ಮೋಳೆಕರ ನಿರೂಪಿಸಿದರು, ಮಹಾಂತೇಶ ನಾಯಿಕ,ಸ್ವಾಗತಿಸಿದರು ಅಶೋಕ ಹುಲ್ಲೆನ್ನವರ ವಂದಿಸಿದರು.
ವರದಿ : ಮುರಗೇಶ ಗಸ್ತಿ




