ಕಂಪ್ಲಿ:ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪಟೇಲ್ ನಗರ ಬಳ್ಳಾರಿಯ ಶಾಲೆಯ ಮಕ್ಕಳು ಮತ್ತು ಶಿಕ್ಷಕರು ಸಿಬ್ಬಂದಿ ವರ್ಗದವರು ಕೂಡಿ ಕಂಪ್ಲಿ ತಾಲೂಕಿನ ರೇಷ್ಮೆ ಸಾಕಾಣಿಕೆ ತರಬೇತಿ ವೀಕ್ಷಣೆ ಜೊತೆಗೆ ರಾಮಸಾಗರ ರೈತರ ಜೊತೆ ಸಂಪರ್ಕ ಬುಧವಾರ ಭೇಟಿ ಮಾಡಲಾಯಿತು.
ಈ ಸಂದರ್ಭದಲ್ಲಿ ಸಹ ಶಿಕ್ಷಕ ಈರೇಶ್ ಮಾತಾಡಿ ಮಕ್ಕಳಿಗೆ ಒಂದು ದಿನ ಪ್ರವಾಸ ಪ್ರಯುಕ್ತ ಮಕ್ಕಳಿಗೆ ರೈತರ ಅನುಭವ ಮತ್ತು ರೇಷ್ಮೆ ಕೃಷಿ ಇಲಾಖೆ ಮಾಹಿತಿ ನೀಡುವುದರ ಮೂಲಕ ಮಕ್ಕಳಿಗೆ ಜ್ಞಾನ ಸಂಪತ್ತನ್ನು ಬಲಗೊಳಿಸುವ ನಿಟ್ಟಿನಲ್ಲಿ ಮಕ್ಕಳಿಗೆ ರಕ್ಷಣೆ ಜಾಗೃತಿ ಮೂಡಿಸಲಾಯಿತು ಎಂದರು.

ಈ ಸಂದರ್ಭದಲ್ಲಿ ಸ.ಹಿ.ಪ್ರಾ ಶಾಲೆ ಪಟೇಲ್ ನಗರ್ ಬಳ್ಳಾರಿ ಪೂರ್ವ ಮುಖ್ಯ ಗುರು ಶ್ರೀಮತಿ ಜಯಶ್ರೀ, ಸಹ ಶಿಕ್ಷಕರು ವಿಜಯ ಕುಮಾರ್, ಮರೀನಾ ಲರೇಟ, ಮಧುಸೂದನ ರೆಡ್ಡಿ, ತಬಸೂಮ್, ಫಾತಿಮಾ ಸುಭದ್ರ, ಬೇಟಗೇರಿ ಪಾರಿಜಾತ, ಜ್ಯೋತಿ, ಈರೇಶ.ಎಸ್, ಸೇರಿ ಒಟ್ಟು 5 ಸರ್ಕಾರಿ ಬಸ್ ವಾಹನದಲ್ಲಿ 240 ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.





