ಅಥಣಿ: ಪಿ.ಎಸ್.ಆರ್ ಅಂತರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣಾ ಆಯೋಗದ ಅಥಣಿ ತಾಲೂಕು ಅಧ್ಯಕ್ಷರಾದ ಅಕ್ಷಯ್ ಮ್ಯಾಗೇರಿ ಅವರು ತಮ್ಮ ಸಮಾಜಮುಖಿ ಸೇವೆಯನ್ನು ಮುಂದುವರಿಸಿದ್ದಾರೆ. ಇಂದು ಅಥಣಿ ತಾಲೂಕಿನ ಬಡ ಜನರಿಗೆ ಹಾಗೂ ತಡರಾತ್ರಿ ರಸ್ತೆಬದಿಯಲ್ಲಿ ಆಸರೆ ಪಡೆದಿದ್ದ ನಿರ್ಗತಿಕರಿಗೆ ಊಟದ ವ್ಯವಸ್ಥೆಯನ್ನು ಮಾಡಿಕೊಡುವ ಮೂಲಕ ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಹಸಿವಿನಿಂದ ಯಾರೂ ಮಲಗಬಾರದು ಎಂಬ ಉದ್ದೇಶದಿಂದ ಈ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ವರದಿ:ಪ್ರಲ್ಹಾದ ವಾಘಮೋರೆ




