ಸೇಡಂ:ರಂಜೋಳ್ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬದ ಸ ಹಿ ಪ್ರಾ ಶಾಲೆ ಬಟಗೇರಾ ಕೆ ಶಾಲೆಯಲ್ಲಿ ಹಮಿಕೊಳಲಾಗಿತ್ತು.
ಈ ಕಾರ್ಯಕ್ರಮದ ಉದ್ಘಾಟಕರಾಗಿ ಶಂಕರಲಿಂಗಪ್ಪ ಕ್ಷೇತ್ರ ಸಮನ್ವಯಾಧಿಕಾರಿಗಳು ಕಾರ್ಯಕ್ರಮನ್ನು ಉದ್ಘಾಟಿಸಿ ಮಕ್ಕಳ ಗುಣಮಟ್ಟದ ಕಲಿಕೆಗೆ ಉತ್ತಮವಾದ ವೇದಿಕೆಯಾಗಿದೆ ಎಂದು ಹೇಳಿದರು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ರವಿ ರಾಥೋಡ್ , ಶ್ರೀಮತಿ ಸತ್ಯಮ್ಮಾ , ಶ್ರೀಶೈಲ್ ಕಾಕಲ್ವರ್ ಗ್ರಾಮ ಪಂ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು ಮಾತನಾಡಿ ಶಾಲೆಯೂ ಅಭಿವೃದ್ಧಿ ಹೊಂದಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.
ಎಸ್ಡಿಎಂಸಿ ಅಧ್ಯಕ್ಷರಾದ ಯಲ್ಲಪ್ಪ, ಗ್ರಾಮ ಪಂಚಾಯತ್ ಸದಸ್ಯರಾದ ವೆಂಕಟಮ್ಮ,ಬಸವರಾಜ ಪಾಟೀಲ್, ಸಂತೋಷ ಜಾಕನಹಳ್ಳಿ, ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಉಪಾಧ್ಯಕ್ಷರಾದ ವರದ ಸ್ವಾಮಿ ಬಿ ಹಿರೇಮಠ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಸವರಾಜ ಸಾಗರ್ ಮಾತನಾಡಿ ಶಿಕ್ಷಕರು ನಿಸ್ವಾರ್ಥ ಸೇವೆ ಪ್ರಾಮಾಣಿಕತೆಯಿಂದ ಮಾಡಿರಿ ಎಂದು ಹೇಳಿದರು.
ಲಕ್ಷ್ಮಣ್ ರಂಜೋಳ್ಕರ್ ಜಿಪಿಟಿ ಶಿಕ್ಷಕರ ಸಂಘ ಸೇಡಂ, ಸಕ್ರೆಪ್ಪ ಮತ್ತು ಝಾಕೀರ್ ಹುಸೇನ್ ಇಸಿಓ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಟಿಗೆರಾ ಕೆ ಮುಖ್ಯ ಗುರುಗಳಾದ ಶಿವಲೀಲಾ ಹಾಗೂ ಗಣಪತಿ ಬಡಿಗೇರ ಸಿ,ಆರ್,ಪಿ ರಂಜೋಳ್ ಅವರು ಪ್ರಾಸ್ತವಿಕವಾಗಿ ಮಾತನಾಡಿದರು.
ಎಲ್ಲಪ್ಪ ಜಿಪಿಟಿ ಶಿಕ್ಷಕರು ನಿರೂಪಿಸಿದರು.ಹಂಪಯ್ಯ ಸಿ ಆರ್ ಪಿ ಊಡಿಗಿ, ಹಸ್ಮಾ ಮುಖ್ಯ ಗುರುಗಳು, ಉಸ್ಮಾನ್ ಅಲಿ ಕ್ಲಸ್ಟರಿನ ಮುಖ್ಯಗುರುಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳು ಪಾಲಕರು ಪೋಷಕರು ಮತ್ತು ಶಾಲಾ ಮಕ್ಕಳು ಹಾಜರಿದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




