ಬೆಳಗಾವಿ: ಕೆಎಲ್ಇ ಕಾರ್ಯಾಧ್ಯಕ್ಷ ಸ್ಥಾನದಲ್ಲಿ ಸುದೀರ್ಘ 40 ವರ್ಷಗಳ ಕಾಲ ಪ್ರಭಾಕರ ಕೋರೆ ನೊಗ ಹೊತ್ತಿದ್ದರು.ಇದೀಗ ಕೆ ಎಲ್ ಇ ಸಂಸ್ಥೆಯ ಆಡಳಿತ ಮಂಡಳಿ ಚುನಾವಣೆಗೆ ಸಲ್ಲಿಸಿದ್ದಂತ ನಾಮಪತ್ರವನ್ನು ದಿಢೀರ್ ಹಿಂಪಡೆಯುವ ಮೂಲಕ, ಕಾರ್ಯಾಧ್ಯಕ್ಷ ಸ್ಥಾನದಿಂದ ಪ್ರಭಾಕರ ಕೋರೆ ನಿರ್ಗಮಿಸಿದ್ದಾರೆ.
ಕೆ ಎಲ್ ಇ ಸಂಸ್ಥೆಯ ಆಡಳಿತ ಮಂಡಳಿ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಕೆ ಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಪ್ರಭಾಕರ ಕೋರೆ ನಾಮಪತ್ರವನ್ನು ಸಲ್ಲಿಸಿದ್ದರು. ಆದರೇ ದಿಢೀರ್ ಬೆಳವಣಿಗೆ ಎನ್ನುವಂತೆ ತಮ್ಮ ನಾಮಪತ್ರವನ್ನು ಹಿಂಪಡೆದು ಅಚ್ಚರಿಯನ್ನು ಮೂಡಿಸಿದ್ದಾರೆ.
ಪ್ರಭಾಕರ ಕೋರೆ ಅವರು 1984ರಲ್ಲಿ ಕೆ ಎಲ್ ಇ ಸಂಸ್ಥೆಯ ನಿರ್ದೇಶಕರಾಗಿ ಗದ್ದುಗೆಗೆ ಏರಿದ್ದರು. ಆ ಬಳಿಕ ಸುದೀರ್ಘ 40 ವರ್ಷಗಳ ಕಾಲ ಕಾರ್ಯಾಧ್ಯಕ್ಷರ ಹುದ್ದೆಯನ್ನು ಪ್ರಭಾಕರ ಕೋರೆ ನಿರ್ವಹಿಸಿದ್ದರು.
ಪ್ರಭಾಕರ ಕೋರೆ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಕೆ ಎಲ್ ಇ ಸಂಸ್ಥೆಗಳ ಸಂಖ್ಯೆ ಕೇವಲ 40 ಆಗಿತ್ತು. ಇದೀಗ ಇದು 240 ಅಂಗ ಸಂಸ್ಥೆಗಳ ಬೃಹತ್ ಸಂಸ್ಥೆಯಾಗಿ ಬೆಳೆದು ನಿಂತಿದೆ.




