Ad imageAd image

ಹಳ್ಳಿಯಲ್ಲಿ ಇರುವುದು ಬೇಜಾರು ಎಂದು ಪ್ರೀತಿಸಿ ಮದುವೆಯಾಗಿದ ನವ ವಿವಾಹಿತೆ ಆತ್ಮಹತ್ಯೆ

Bharath Vaibhav
ಹಳ್ಳಿಯಲ್ಲಿ ಇರುವುದು ಬೇಜಾರು ಎಂದು ಪ್ರೀತಿಸಿ ಮದುವೆಯಾಗಿದ ನವ ವಿವಾಹಿತೆ ಆತ್ಮಹತ್ಯೆ
WhatsApp Group Join Now
Telegram Group Join Now

ಕಲಬುರ್ಗಿ: ಸಹೋದರಿಯರೆಲ್ಲ ಸಿಟಿಯಲ್ಲಿ ಇದ್ದಾರೆ. ನಾನು ಮಾತ್ರ ಹಳ್ಳಿಯಲ್ಲಿ ಇರಬೇಕು ಎಂಬ ಬೇಸರದಿಂದ ಪ್ರೀತಿಸಿ ಮದುವೆಯಾಗಿದ್ದಂತ ನವ ವಿವಾಹಿತೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಕಲಬುರ್ಗಿಯ ಸಿದ್ದೇಶ್ವರ ಕಾಲೋನಿಯಲ್ಲಿ ಇಂತದ್ದೊಂದು ಘಟನೆ ನಡೆದಿದೆ.ಪ್ರೀತಿಸಿ ಮದುವೆಯಾದ ಕೇವಲ 2 ತಿಂಗಳಲ್ಲೇ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವಂತ ಶಾಕಿಂಗ್ ಘಟನೆ ನಡೆದಿದೆ. ಅನಸೂಯಾ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯಾಗಿದ್ದಾರೆ.

ತನ್ನ ಅತ್ತೆ ಮಗನಾಗಿದ್ದಂತ ಅವಿನಾಶ್ ಎಂಬುವರನ್ನು ಅನಸೂಯಾ ಪ್ರೀತಿಸಿ 2 ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು.

ಮದುವೆಯಾದ ಬಳಿಕ ಗಂಡನ ಜೊತೆಯಲ್ಲಿ ಹಳ್ಳಿಯಲ್ಲಿ ವಾಸ ಮಾಡೋದಕ್ಕೆ ಬೇಸರಗೊಂಡಿದ್ದಳು ಎನ್ನಲಾಗಿದೆ. ಇದೇ ಕಾರಣದಿಂದ ಅನಸೂಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಮದುವೆಯಾದ ನಂತ್ರ ಅನುಸೂಯ ತನ್ನ ಗಂಡನೊಂದಿಗೆ ಹಳ್ಳಿಯಲ್ಲಿ ವಾಸವಿದ್ದರು. ಇದರಿಂದ ತೀವ್ರ ಮಾನಸಿಕ ಒತ್ತಡಕ್ಕೂ ಅನುಸೂಯ ಒಳಗಾಗಿದ್ದರು ಎನ್ನಲಾಗಿದೆ. ಹೀಗಾಗಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ಕುಟುಂಬಸ್ಥರು ಹೇಳುತ್ತಿದ್ದಾರೆ.

ಅಂದಹಾಗೆ ಅನುಸೂಯಾಗೆ ಮೂವರು ಸಹೋದರಿಯರಿದ್ದು, ಅವರೆಲ್ಲರೂ ತಮ್ಮ ಗಂಡಂದಿರೊಂದಿಗೆ ಬೆಂಗಳೂರು, ಮುಂಬೈನಲ್ಲಿ ನೆಲೆಸಿದ್ದರು.

ತಾನು ಹಳ್ಳಿ ಬಿಟ್ಟು, ಸಿಟಿಗೆ ಹೋಗಿ ನೆಲಸಬೇಕು ಎಂಬುದು ಅನುಸೂಯ ಆಸೆಯಾಗಿತ್ತು ಎನ್ನಲಾಗಿದೆ. ಆದರೇ ಇದಕ್ಕೆ ಪತಿ, ಕುಟುಂಬಸ್ಥರು ಒಪ್ಪಿರಲಿಲ್ಲ ಎನ್ನಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!