Ad imageAd image

ಜಂಟಿ ಅಧಿವೇಶನ ಭಾಷಣ ಬಳಿಕ ಗಣರಾಜ್ಯೋತ್ಸವದ ಭಾಷಣಕ್ಕೂ ರಾಜ್ಯಪಾಲರ ತಗಾದೆ 

Bharath Vaibhav
ಜಂಟಿ ಅಧಿವೇಶನ ಭಾಷಣ ಬಳಿಕ ಗಣರಾಜ್ಯೋತ್ಸವದ ಭಾಷಣಕ್ಕೂ ರಾಜ್ಯಪಾಲರ ತಗಾದೆ 
WhatsApp Group Join Now
Telegram Group Join Now

ಬೆಂಗಳೂರು: ರಾಜ್ಯ ಸರ್ಕಾರದ ಜಂಟಿ ಅಧಿವೇಶನದಲ್ಲಿ ಸರ್ಕಾರ ಬರೆದುಕೊಟ್ಟ ಭಾಷಣ ಓದದೇ ತೆರಳಿರುವ ರಾಜ್ಯಪಾಲ ಥಾವರ್ ಚಂಡ್ ಗೆಹ್ಲೋಟ್ ಇದೀಗ ಮತ್ತೊಂದು ಭಾಷಣಕ್ಕೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಜಂಟಿ ಅಧಿವೇಶನದ ಭಾಷಣ ಸಂಘರ್ಷದ ಬೆನ್ನಲ್ಲೇ ಇದೀಗ ಗಣರಾಜ್ಯೋತ್ಸವ ಭಾಷಣದ ಬಗ್ಗೆಯೂ ಬಡಿದಾಟ ಆರಂಭವಾಗಿದೆ.

ಗಣರಾಜ್ಯೋತ್ಸವದ ಭಾಷಣದಲ್ಲಿ ಕೇಂದ್ರ ಸರ್ಕಾರವನ್ನು ಟೀಕಿಸುವ ಅಂಶಗಳಿದ್ದರೆ ತಾವು ಸರ್ಕಾರದ ಭಾಷಣವನ್ನು ಓದುವುದಿಲ್ಲ, ಕೆಲ ತಿದ್ದುಪಡಿ ಮಾಡುವುದಾಗಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ ಎನ್ನಲಾಗಿದೆ.

ಗಣರಾಜ್ಯೋತ್ಸವ ಭಾಷಣ ತಿದ್ದುಪಡಿ ಮಾಡಿದರೆ ನಾನೇ ಸಿದ್ಧಪಡಿಸಿದ ಭಾಷಣ ಓದುತ್ತೇನೆ ಎಂದು ತಿಳಿಸಿದ್ದಾರೆ. ರಾಜ್ಯಪಾಕರ ಗಣರಾಜ್ಯೋತ್ಸವದ ಭಾಷಣದ ಬಗ್ಗೆಯೂ ತಗಾದೆ ಆರಂಭವಾಗಿದೆ.

ಗಣರಾಜ್ಯೋತ್ಸವದ ರಜ್ಯಪಾಲರ ಭಾಷಣದಲ್ಲಿ ರಾಜ್ಯ ಸರ್ಕಾರ, ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ತೆರಿಗೆ ಅನ್ಯಾಯ, ಅನುದಾನ ಹಂಚಿಕೆಯಲ್ಲಿ ತಾರತಮ್ಯ ಎಂಬ ಟಿಕೆಗಳಿದ್ದು, ಈ ಅಂಶಗಳನ್ನು ತೆಗೆಯುವುದಾಗಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಜಂಟಿ ಅಧಿವೇಶನದಲ್ಲಿ ರಾಜ್ಯ ಸರ್ಕಾರ ರಾಜ್ಯಪಾಲರಿಗೆ ಬರೆದುಕೊಟ್ಟ ಭಾಷಣದಲ್ಲಿ ನರೇಗಾ ಯೋಜನೆ ಹೆಸರನ್ನು ವಿಬಿಜಿ ರಾಮ್ ಜಿ ಎಂದು ಬದಲಾಯಿಸಿ, ಕೆಲ ತಿದ್ದುಪಡಿ ಮಾಡಿದ್ದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ನಿಟ್ಟಿನಲ್ಲಿ ಕೆಲ ಅಂಶಗಳಿದ್ದವು. ಇದೇ ಕಾರಣಕ್ಕೆ ರಾಜ್ಯಪಾಲರು ಜಂಟಿ ಅಧಿವೇಶದಲ್ಲಿ ಭಾಷಣ ಓದದೇ ನಿರ್ಗಮಿಸಿದ್ದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!