ಚೆನ್ನೈ : ಶನಿವಾರ ತಿರುಚ್ಚಿ-ಚೆನ್ನೈ ಹೆದ್ದಾರಿಯಲ್ಲಿ ಪೊಲೀಸ್ ವಾಹನದ ಮೇಲೆ ಬಾಂಬ್ ದಾಳಿ ನಡೆದಿದೆ. ಈ ಕುರಿತು ತಮಿಳುನಾಡು ಮಾಜಿ ಮುಖ್ಯಮಂತ್ರಿ ಮತ್ತು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಸರ್ಕಾರವನ್ನ ತರಾಟೆಗೆ ತೆದುಕೊಂಡಿದ್ದು, ಅಪರಾಧಿಗಳಿಗೆ ಪೊಲೀಸರ ಬಗ್ಗೆ ಅಥವಾ ಸರ್ಕಾರದ ಬಗ್ಗೆ “ಸಂಪೂರ್ಣವಾಗಿ ಭಯವಿಲ್ಲ” ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ರಾಜ್ಯ ವಿಧಾನಸಭೆಯಲ್ಲಿ “ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡು ಹೆಮ್ಮೆಪಡುತ್ತಿದ್ದರೆ”, “ಕೆಲವು ನಿಗೂಢ ಜನರು ಪೆರಂಬಲೂರು ಟೋಲ್ ಪ್ಲಾಜಾ ಬಳಿ ಪೊಲೀಸ್ ವಾಹನದ ಮೇಲೆ ದೇಶೀಯ ಬಾಂಬ್’ಗಳನ್ನು ಎಸೆದಿದ್ದಾರೆ” ಎಂದು ಪಳನಿಸ್ವಾಮಿ ಹೇಳಿದರು.




