ಮೈಸೂರು : ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲ್ಲ. ಸುಮ್ಮನೇ ರಾಜಕೀಯವಾಗಿ ಭಾಷಣ ಮಾಡಿದ್ದಾರೆ ಅಷ್ಟೇ ಎಂದು ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದರು.
ಬಿಜೆಪಿ ಜೊತೆ ಮೈತ್ರಿಯಿಂದ ಅಧಿಕಾರಕ್ಕೆ ಬರಬಹುದು ಅಂತ ಜೆಡಿಎಸ್ ನವರು ಅಂದುಕೊಂಡಿದ್ದಾರೆ. ಬಹುಮತ ಬಂದರೆ ಬಿಜೆಪಿ ಅವರು ಜೆಡಿಎಸ್ ಗೆ ಯಾಕೆ ಅಧಿಕಾರ ಬಿಟ್ಟು ಕೊಡುತ್ತಾರೆ? ಜೆಡಿಎಸ್ ಬಿಜೆಪಿ ಇಬ್ಬರಿಗೂ ಬಹುಮತ ಬರುವುದಿಲ್ಲ.ಒಂದು ವೇಳೆ ಬಂದರೂ ಕೂಡ ಬಿಜೆಪಿಯವರು ಜೆಡಿಎಸ್ಗೆ ಅಧಿಕಾರ ಕೊಡುವುದಿಲ್ಲ.
2028ರಲ್ಲೂ ರಾಜ್ಯದಲ್ಲಿ ನಮ್ಮ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ನಾಯಕತ್ವ ಯಾರದ್ದು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದರು.




