ರಾಯಚೂರು: ಜಿಲ್ಲೆಯಲ್ಲಿ ಹುಚ್ಚು ನಾಯಿಯೊಂದು ಕಂಡಕಂಡವರ ಮೇಲೆ ಎರದಿ ಕಡಿದಿದೆ. ಆಟವಾಡುತ್ತಿದ್ದಂತ 10 ಮಕ್ಕಳಿಗೂ ಹುಚ್ಚು ನಾಯಿ ಕಡಿತವಾಗಿದ್ದು, ಗಂಭೀರವಾಗಿ ಗಾಯಗಳಾಗಿದ್ದಾವೆ.
ಹುಚ್ಚು ನಾಯಿಗಳ ದಾಳಿಯಿಂದ ಕಡಿತಕ್ಕೆ ಒಳಗಾದಂತ ಮಕ್ಕಳಿಗೆ ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.ಅಲ್ಲದೇ ಹೆಚ್ಚಿನ ಚಿಕಿತ್ಸೆಗಾಗಿ ಸಿಂಧನೂರು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಈ ವಿಷಯ ತಿಳಿದು ಆಸ್ಪತ್ರೆಗೆ ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು. ಹುಚ್ಚು ನಾಯಿ ಮತ್ತಷ್ಟು ಜನರ ಮೇಲೆ ದಾಳಿ ಮಾಡಿ, ಗಾಯಗೊಳಿಸೋ ಮುನ್ನ ಸೆರೆ ಹಿಡಿಯಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.




