ಸೇಡಂ: ತಾಲೂಕಿನ ಸಿಲಾರಕೋಟ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ ದಿನ ಆಚರಣೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಡಾಕ್ಟರ್ ಮಧುಸೂಧನ್ ರೆಡ್ಡಿ ಪಾಟೀಲ್ ಅವರು ಭಾಗವಹಿಸಿ ಭಾರತದ ಸಂವಿಧಾನದ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರು.

ಈ ಸಮಾರಂಭದಲ್ಲಿ ಶಾಲಾ ಮಕ್ಕಳು ದೇಶಭಕ್ತಿ ಗೀತೆಗಳಿಗೆ ಅದ್ಬುತವಾದ ನೃತ್ಯ ಪ್ರದರ್ಶನ ಮಾಡಿ ಆನಂದಿಸಿದರು.
ಈ ಸಂಧರ್ಭದಲ್ಲಿ ರಿಬ್ಬನ್ ಪಲ್ಲಿ ಸಿ ಆರ್ ಪಿ ಸಾಯಬಣ್ಣ ಪೂಜಾರಿ, ಶಾಲೆಯ ಮುಖ್ಯ ಗುರುಗಳಾದ ಪುಷ್ಪ, ಹಿರಿಯ ಶಿಕ್ಷಕರಾದ ರಮೇಶ್, ಸಹ ಶಿಕ್ಷಕರಾದ ಅಮೃತ್ ಪಾಟೀಲ್, ಶಾಲೆಯ ಎಸ್ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು, ಅತಿಥಿ ಶಿಕ್ಷಕರು ಹಾಗೂ ಶಾಲಾ ಮಕ್ಕಳು ಭಾಗಿಯಾಗಿದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




