ಐಗಳಿ : ಗಣರಾಜ್ಯೋತ್ಸವದ ನಿಮಿತ್ಯ ಐಗಳಿ ಗ್ರಾಮದ ಸಾರ್ವಜನಿಕ ದ್ವಜಾರೋಹಣವನ್ನು ರೇಷ್ಮೆ ಇಲಾಖೆಯ ವಿಶ್ರಾಂತ ಅಧಿಕಾರಿ ಹಾಗೂ ಗ್ರಾ.ಪಂ ಹಿರಿಯ ಸದಸ್ಯರಾದ ಬಸಗೌಡ ಬಿರಾದಾರ ನೆರವೇರಿಸಿದರು. ಈ ವೇಳೆ ಪೋಲಿಸ್ ಪರೇಡ್, ಮಾಜಿ ಸೈನಿಕರು ಸಮವಸ್ತçದಲ್ಲಿ ಮತ್ತು ಸ್ಕೌಟ್ಸ್ ಹಾಗೂ ಗೈಡ್ಸ್ ವಿದ್ಯಾರ್ಥಿಗಳು ಪರೇಡ್ ಮೂಲಕ ಗೌರವ ಸಲ್ಲಿಸುವದರ ಮೂಲಕ ಜನ ಮನ ಸೆಳೆದರು.

ಸ್ಥಳಿಯ ಬಸವೇಶ್ವರ ಪಿ.ಕೆ.ಪಿ.ಎಸ್ ಮುಂದೆ ಕಾರ್ಯದರ್ಶಿ ಚಂದ್ರಕಾಂತಗೌಡ ಪಾಟೀಲ, ಮುರುಘೇಂದ್ರ ಬ್ಯಾಂಕ ಮುಂದೆ ಮಲ್ಲಪ್ಪ ಮಾಕಾಣಿ, ಪಶು ಚಿಕಿತ್ಸಾಲಯದ ಮುಂದೆ ಗ್ರಾ.ಪಂ ಸದಸ್ಯೆ ಭೌರವ್ವಾ ಮಠಪತಿ, ಬಿ.ಸಿ.ಎಮ್ ಹಾಸ್ಟೇಲ್ ಮುಂದೆ ಗ್ರಾ.ಪಂ ಸದಸ್ಯ ಸಂಭಾಜೀ ಜಾಧವ, ಪ್ರಗತಿ ಬ್ಯಾಂಕ ಮುಂದೆ ಪಾಂಡುರಂಗ ಭೊಸಲೆ ಡಿ.ಸಿ.ಸಿ ಬ್ಯಾಂಕ ಮುಂದೆ ಹಿರಿಯರಾದ ಸಿ.ಎಸ್.ನೇಮಗೌಡ, ಗ್ರಾ.ಪಂ ಕಾರ್ಯಾಲಯದಲ್ಲಿ ಗ್ರಾ.ಪಂ ಸದಸ್ಯ ಸುರೇಶ ಬಿಜ್ಜರಗಿ, ಬಸವ ಸಮೀತಿ ಕಾರ್ಯಾಲಯದ ಮುಂದೆ ವಿಶ್ರಾಂತ ಶಿಕ್ಷಕ ಎಸ್.ಜಿ.ಬಿರಾದಾರ, ಮಲ್ಲಿಕಾರ್ಜುನ ಬ್ಯಾಂಕ್ ಮುಂದೆ ಯುವ ನಾಯಕ ಶಿವಾನಂದ ಸಿಂಧೂರ, ಆದರ್ಶ ಶಿಕ್ಷಣ ಸಂಸ್ಥೆಯಲ್ಲಿ ಗ್ರಾ.ಪಂ ಸದಸ್ಯೆ ಶಕುಂತಲಾ ಪಾಟೀಲ, ಸರಕಾರಿ ಕನ್ನಡ ಹಿರಿಯ ಶಾಲೆಯಲ್ಲಿ ಮುಖ್ಯ ಶಿಕ್ಷಕ ಬಿ.ಎಸ್.ಅಡಹಳ್ಳಿ, ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಗ್ರಾ.ಪಂ ಸದಸ್ಯ ನಿಂಗಪ್ಪ ತೆಲಸಂಗ, ಪೋಲಿಸ್ ಠಾಣೆಯಲ್ಲಿ ಪಿ.ಎಸ್.ಆಯ್ ಚಂದ್ರಶೇಖರ ಸಾಗನೂರ, ಒಣದ್ರಾಕ್ಷಿ ಸಂಸ್ಕರಣಾ ಘಟಕದ ಮುಂದೆ ಮಾಜಿ ಶಾಸಕ ಶಹಜಹಾನ ಡೊಂಗರಗಾಂವ, ಹೆಸ್ಕಾಂ ಕಾರ್ಯಾಲಯದಲ್ಲಿ ವ್ಹಿ.ಆರ್.ಗುರುಸ್ವಾಮಿ, ಸಹಾಯಕ ಅಭಿಯಂತರರು, ಸ್ಥಳಿಯ ಕಿರಣರಾಜ ಸೈನಿಕನ ಸ್ಮಾರಕದ ಮುಂದೆ ಮಾಜಿ ಸೈನಿಕರಾದ ರಾಮಗೌಡ ಬಿರಾದಾರ, ಸಿ.ಕೆ.ಜಿ ಬ್ಯಾಂಕ ಮುಂದೆ ಮಾಜಿ ಸೈನಿಕ ಹಾಗೂ ಅಧ್ಯಕ್ಷ ಕಾಶೀನಾಥ ಗದಾಡೆ, ನೆರವೇರಿಸಿದರು.




