ಬೆಂಗಳೂರು :ಭಾರತದಲ್ಲಿ ಮಹಿಳಾ ಸ್ವ ಸಹಾಯ ಸಂಘಗಳು ಮಹಿಳೆಯರ ಆರ್ಥಿಕ ಸ್ವಾವಲಂಬನೆ, ಉಳಿತಾಯ ಅಭ್ಯಾಸ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ನಿರ್ಣಾಯಕ ಪಾತ್ರ ಮಹಿಳೆಯರ ಜವಾಬ್ದಾರಿಯಾಗಿದೆ ಮಹಿಳೆಯರನ್ನು ಸ್ವಯಂ ಉದ್ಯೋಗಸ್ಥರಾಗಿ ಮಾಡುವುದೆ ನಮ್ಮ ಐಪಿಡಿಪಿ ಸಂಸ್ಥೆಯ ಮೂಲ ಉದ್ದೇಶ ಎಂದು ಸಮಗ್ರ ಜನಾಭಿವೃದ್ಧಿ ಸಂಸ್ಥೆ(ಐಪಿಡಿಪಿ) ನಿರ್ದೇಶಕ ಡಾ. ಕೆ ಭೀಮಾ ನಾಯಕ್ ಹೇಳಿದರು.
ಅವರು ಆರ್ ಆರ್ ನಗರ ವಿಧಾನ ಸಭಾ ಕ್ಷೇತ್ರದ ಬುದ್ದನಗರದಲ್ಲಿರುವ ಸಮುದಾಯ ಭವನದಲ್ಲಿ ಸಮಗ್ರ ಜನಾಭಿವೃದ್ಧಿ ಸಂಸ್ಥೆ(ಐಪಿಡಿಪಿ) ಅಧ್ಯಕ್ಷ ಜಯರಾಮನ್, ಡಾ.ಕೆ ಭೀಮಾ ನಾಯಕ್,ಪಾರ್ಥ, ಮಂಜುಳಾ,ಶಿವಮ್ಮ , ಚಿದಾನಂದ ಹೆಚ್ ಬಿ, ಸದಾಶಿವ ಇವರುಗಳ ನೇತೃತ್ವದಲ್ಲಿ ಆಯೋಜಿಸಿದ್ದ :’ಮಹಿಳಾ ಸ್ವಸಹಾಯ ಸಂಘಗಳ ಉದ್ಯಮಶೀಲ:’ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಡಾ. ಕೆ ಭೀಮಾ ನಾಯಕ್ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದರು.

ಜಯರಾಮನ್ ಮಾತನಾಡಿ ಮಹಿಳೆಯರು ಸಮಾಜದಲ್ಲಿ ಜಾಗೃತಿ ಮೂಲಕ ಬಡತನ ನಿರ್ಮೂಲನೆ ಆಗುವ ನಿಟ್ಟಿನಲ್ಲಿ ನಮ್ಮ ಐಪಿಡಿಪಿ ಸಂಸ್ಥೆ ಸ್ವಸಹಾಯ ಸಂಘಗಳ ಮಹಿಳಾ ಸದಸ್ಯರಿಗೆ ಅದಲ್ಲದೆ ನಮ್ಮ ಸಂಸ್ಥೆಯಿಂದ ತರಬೇತಿ ನೀಡಿ ಉದ್ಯಮಶೀಲವನ್ನಾಗಿ ಉದ್ದೇಶದಿಂದ 22 ವರ್ಷಗಳಿಂದ ಮಹಿಳೆಯರ ಉತ್ತೇಜನಕ್ಕಾಗಿ ಈ ಕಾರ್ಯ ಕ್ರಮ ಪ್ರತಿ ವರ್ಷ ಮಾಡುತ್ತೇವೆ ಈಗಾಗಲೇ ಎರಡು ಸಾವಿರ ಇನ್ನೂರು ಸ್ವಸಹಾಯ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಐಪಿಡಿಪಿ ಅಧ್ಯಕ್ಷ ಜಯರಾಮನ್ ಮಾತನಾಡಿದರು.
ಸದಾಶಿವ ತರಬೇತಿ ಮುಖ್ಯಸ್ಥ ಮಾತನಾಡಿ ಮಹಿಳೆಯರಿಗೆ ಪ್ರತಿಯೊಂದು ಕ್ಷೇತ್ರದಲ್ಲಿ ಧೈರ್ಯದಿಂದ ಕಾರ್ಯ ನಿರ್ವಹಿಸಿ ಸಮಾಜದಲ್ಲಿ ಉನ್ನತ ಉದ್ಯಮಿಗಳಾಗಿ ಕೊಡ ಕೈಗಳಾಗ ಬೇಕು ಚಾಚುವ ಕೈಗಳು ಆಗಬಾರದು ಆವಾಗ ಸಮಾಜ ಅಭಿವೃದ್ಧಿ ಆಗುತ್ತದೆ ಎಂದು ಸದಾಶಿವ ಮಹಿಳೆಯರಿಗೆ ಮಾರ್ಗದರ್ಶನ ನೀಡಿದರು.
ಪ್ರಕೃತಿ ಅವರ ಕಾರ್ಯ ಕ್ರಮ ನಿರೂಪಣೆ ಮಾಡಿದರು.
ಈ ಮಹಿಳಾ ಸ್ವಸಹಾಯ ಸಂಘಗಳ ಉದ್ಯಮಶೀಲ ಕಾರ್ಯ ಕ್ರಮದಲ್ಲಿ ಶ್ರೀ ಅನ್ನಪೂರ್ಣೇಶ್ವರಿ ಸ್ವ ಸಹಾಯ ಸಂಘ,ಶ್ರೀ ವಜ್ರೇಶ್ವರಿ ಸ್ತ್ರೀ ಶಕ್ತಿ ಸಂಘ, ಮುಕ್ತ ಮಹಿಳಾ ಸ್ವಸಹಾಯ ಸಂಘಗಳ ಮಳಿಗೆಗಳು ಭಾಗವಹಿಸಿದ್ದವು
ಈ ಸಂದರ್ಭದಲ್ಲಿ ಕೋಆರ್ಡಿನೇಟರ್ ಮಂಜುಳಾ ಕೆ.ಎನ್, ಪದ್ಮಾ, ನಿಖಿಲ್, ಶಿವಸ್ವಾಮಿ, ಕೆ.ಎನ್, ಸುನೀತಾ, ಪ್ರಕೃತಿ ಜಿ, ವರಲಕ್ಷ್ಮಿ, ಅನಿತಾ ಜೇಕಬ್ ,ಡೆಬರಾಟಿ ಬಿಸ್ಟಸ್, ಸೇರಿದಂತೆ ಹಲವಾರು ಮಹಿಳೆಯರು, ಸ್ವ ಸಹಾಯ ಸಂಘಗಳ ಪ್ರಮುಖರು ಪ್ರತಿನಿಧಿಗಳು ಮಹಿಳೆಯರು ಮುಂತಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಪದಾಧಿಕಾರಿಗಳು ಇದ್ದರು.
ವರದಿ: ಅಯ್ಯಣ ಮಾಸ್ಟರ್




