ಚಿಂಚೋಳಿ : ತಾಲೂಕಿನ ಸುಲೇಪೇಟ್ ಗ್ರಾಮದಲ್ಲಿ ಸೇಡಂ ವಿಧಾನಸಭಾ ಕ್ಷೇತ್ರದ ಪರಜಿತ ಅಭ್ಯರ್ಥಿಯಾದ ಹಾಗೂ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಬಾಲರಾಜ್ ಗುತ್ತೇದಾರ್ ಅವರು ಕರ್ನಾಟಕ ರಾಜ್ಯದಲ್ಲಿ ಅಳುತ್ತಿರುವ ಕಾಂಗ್ರೆಸ್ ಪಕ್ಷದಲ್ಲಿ ಸೇಡಂ ತಾಲೂಕಿನ ಸಚಿವರಾದ ಪ್ರಕಾಶ್ ಪಾಟೀಲ್ ಅವರಿಗೆ ನೇರವಾಗಿ ಸವಾಲು ಹಾಕುತ್ತೇನೆ ಈ ಭಾಗದ ಜನರಿಗೆ ಉದ್ಯೋಗವಿಲ್ಲ ಯುವಜನತೆಗೆ ಬದುಕಲು ಯಾವುದೇ ರೀತಿಯಿಂದ ಕೆಲಸ ಇಲ್ಲದನೆ ಕಾನೂನು ಬಹಿರ ವೃತ್ತಿಯಲ್ಲಿ ತೊಡಗುತ್ತಿದ್ದಾರೆ.
ಅಷ್ಟೇ ಅಲ್ಲ ಜನರಿಗೆ ಉದ್ಯೋಗ ನೀಡಬೇಕಾದರೆ ಇಲ್ಲಿರುವಂತಹ ಅನೇಕ ಕಾರ್ಖಾನೆಗಳಲ್ಲಿ ಬೇರೆ ರಾಜ್ಯದಿಂದ ಆಗಮಿಸಿದಂತ ಕಾರ್ಮಿಕರನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಿದ್ದಾರೆ ನಮ್ಮ ಕ್ಷೇತ್ರದ ಜನರಿಗೆ ಕೆಲಸ ಕೊಡುತ್ತಿಲ್ಲ ಅದಕ್ಕಾಗಿ ನಮ್ಮ ಪಕ್ಷದ ವತಿಯಿಂದ ಬೇರೆ ರಾಜ್ಯದಿಂದ ಖಾಸಗಿ ಕಂಪನಿಯ ಒಡೆತನದಲ್ಲಿರುವಂತ ವ್ಯಕ್ತಿಗಳನ್ನ ಕರೆಸಿ, ಉದ್ಯೋಗ ಮೇಳವನ್ನು ಮಾಡುತ್ತೇವೆ ಇಲ್ಲಿ ಇರುವಂತಹ ಭಾಗದ ಜನರಿಗೆ ಉದ್ಯೋಗ ಅವಕಾಶವನ್ನು ಕೊಡಿಸುವಂತ ಪ್ರಯತ್ನ ನಾನು ಮಾಡುತ್ತೇನೆಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ.
ವರದಿ : ಸುನಿಲ್ ಸಲಗರ




