ದಾವಣಗೆರೆ : ಮದುವೆಯಾದ 45 ದಿನಕ್ಕೆ ನವವಿವಾಹಿತ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ದಾವಣಗೆರೆತಾಲೂಕಿನ ಗುಮ್ಮನೂರಿನಲ್ಲಿ ನಡೆದಿದೆ. ಹರೀಶ್(30) ಮೃತ ದುರ್ದೈವಿಯಾಗಿದ್ದು, ನನ್ನ ಸಾವಿಗೆ ಪತ್ನಿಯ ವರ್ತನೆಯ ಕಾರಣ ಎಂದು 2 ಪುಟಗಳ ಡೆತ್ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ.
ದುರ್ದೈವ ಅಂದರೆ ಹರೀಶ್ ಸಾವಿನ ಬೆನ್ನಲ್ಲೇ ಮುಂದೆ ನಿಂತು ಮದುವೆ ಮಾಡಿಸಿದ ತಪ್ಪಿಗೆ ಯುವತಿಯ ಸೋದರ ಮಾವ ರುದ್ರೇಶ್ ಸಹ ಅತ್ಮಹತ್ಯೆಗೆ ಶರಣಾಗಿದ್ದಾರೆ.
ರುದ್ರೇಶ್ ದಾವಣಗೆರೆಯ ಅನೆಕೊಂಡದ ನಿವಾಸಿಯಾಗಿದ್ದು, 4 ದಿನದ ಹಿಂದೆ ಕುಮಾರ್ ಎಂಬಾತನ ಜತೆ ಹರೀಶ್ ಪತ್ನಿ ಓಡಿಹೋಗಿದ್ದಳು. ಇದರಿಂದ ಅವಮಾನ ತಾಳಲಾರದೆ ರುದ್ರೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಯುವತಿಯ ಹುಚ್ಚಾಟಕ್ಕೆ ಇಬ್ಬರ ಪ್ರಾಣ ಹೋಗಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.




