ಸಿರುಗುಪ್ಪ : ತಾಲೂಕು ಸವಿತಾ ಸಮಾಜದ ವತಿಯಿಂದ ನಗರದ ಶ್ರೀ ಪ್ಯಾಟೆ ಆಂಜನೇಯ್ಯ ಸ್ವಾಮಿ ದೇವಸ್ಥಾನದಿಂದ ತಾಲೂಕು ಕ್ರೀಡಾಂಗಣದವರೆಗೆ ಶ್ರೀ ಸವಿತಾ ಮಹರ್ಷಿ ಭಾವಚಿತ್ರ ಮೆರವಣಿಗೆ ಜರುಗಿತು.
ಸವಿತಾ ಸಮಾಜದ ತಾಲೂಕಾಧ್ಯಕ್ಷ ವೀರೇಂದ್ರ ಅವರು ಮಾತನಾಡಿ ಯುಗ ಪುರುಷರಾಗಿರುವ ಮಹರ್ಷಿಯವರು ರಥ ಸಪ್ತಮಿಯಂದು ಜನಿಸಿರುತ್ತಾರೆ.
ಸರ್ಕಾರದ ವತಿಯಿಂದ ಜ.25 ಜಯಂತಿಯನ್ನು ಆಚರಿಸಲಾಗಿದ್ದು, ಸಮಾಜದ ವತಿಯಿಂದ ಇಂದು ಮೆರವಣಿಗೆಯನ್ನು ನಡೆಸಿ ನಗರದ ಹೊರವಲಯದಲ್ಲಿರುವ ಸಮುದಾಯದ ಜಾಗದಲ್ಲಿ ಪ್ರಸಾದ ವ್ಯವಸ್ಥೆಯನ್ನು ಹಮ್ಮಿಕೊಳ್ಳಲಾಗಿದೆಂದು ತಿಳಿಸಿದರು.
ರಾಜಬೀದಿಯಲ್ಲಿ ಜರುಗಿದ ಮೆರವಣಿಗೆಯಲ್ಲಿ ಯುವಕರು ನೃತ್ಯಗೈದು ಸಂಭ್ರಮಿಸಿದರು. ಇದೇ ವೇಳೆ ಸವಿತಾ ಸಮಾಜದ ತಾಲೂಕು ಗೌರವಾಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷ ಯೋಗಿರಾಜ್, ಕಾರ್ಯದರ್ಶಿ ಅಂಬರೀಶ್, ಖಜಾಂಚಿ ಜಗಧೀಶ್, ಹಾಗೂ ಸಮುದಾಯದ ಇನ್ನಿತರ ಮುಖಂಡರಿದ್ದರು.
ವರದಿ : ಶ್ರೀನಿವಾಸ. ನಾಯ್ಕ




